ಬಡಗಬೆಳ್ಳೂರಿನಲ್ಲಿ 35ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಸಾರ್ವಜನಿಕ ಶನಿ ಪೂಜೆ
ಕೈಕಂಬ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಜ.6ರಂದು ಶನಿವಾರ 35ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು ನಡೆಯಲಿರುವುದು.

ಜ.6ರಂದು ಬೆಳಿಗ್ಗೆ ಗಂಟೆ 8:30 ರಿಂದ ಸಾರ್ವಜನಿಕ ಶನಿ ಪೂಜೆಯು ನಡೆಯಲಿರುವುದು, ಬೆಳಿಗ್ಗೆ ಗಂಟೆ 9:00 ರಿಂದ ಅಯ್ಯಪ್ಪ ವ್ರತ ಧಾರಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಅಪ್ಪದ ಪೂಜೆ, 12:30 ಕ್ಕೆ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಮಹಾಪೂಜೆ ಬಳಿಕ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಮಧ್ಯಾಹ್ನ 1:00ಗೆ ಅನ್ನಸಂತರ್ಪಣೆ ನಡೆಯಲಿರುವುದು ಎಂದು ಅಯ್ಯಪ್ಪ ಭಕ್ತವೃಂದ ಬಡಗಬೆಳ್ಳೂರು ಪ್ರಕಟನೆಯಲ್ಲಿ ತಿಳಿಸಿದೆ.