ಮಣಿಕಂಠಪುರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ೧೮ನೇ ವರ್ಷದ ಭಜನಾ ಸಂಕೀರ್ತನೆ
ಕೈಕಂಬ: ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರದಲ್ಲಿ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜ.೬ರಂದು ಶನಿವಾರ ಸಂಜೆ ೬:೦೦ರಿಂದ ಜ.೭ರಂದು ಭಾನುವಾರ ಬೆಳಗ್ಗೆ ೭:೦೦ಗಂಟೆಯವರೆಗೆ ಭಜನಾ ಸಂಕೀರ್ತನೆ ನಡೆಯಲಿರುವುದು.

ಮಲ್ಲಿಕಾ ಎಂ. ಚೌಟ ಕೃಷ್ಣನಗರ ಬಡಕಬೈಲ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ಆಶಿರ್ವಚನ ನೀಡಲಿದ್ದಾರೆ.
ಜ.೭ರಂದು ಭಾನುವಾರ ಅಯ್ಯಪ್ಪ ಸ್ವಾಮಿಯ ವೃತಧಾರಿಗಳಿಗೆ ಇರುಮುಡಿ ಕಟ್ಟುವುದು ಹಾಗೂ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ನೆರವೇರಲಿದೆ, ಬಳಿಕ ಅನ್ನಸಂತರ್ಪಣೆಯು ಜರುಗಲಿದೆ ಎಂದು ಶ್ರೀ ಮಣಿಕಂಠ ಭಜನಾ ಮಂದಿರದ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.