ಏರ್ಯ ನೇಮೋತ್ಸವ ಸಂಪನ್ನ: ಏರ್ಯ ಲಕ್ಷ್ಮೀನಾರಾಯಣ ಆಳ್ವ ಪ್ರಶಸ್ತಿ ಪ್ರದಾನ
ಬಂಟ್ವಾಳ: ತಾಲೂಕಿನ ಏರ್ಯ ಬೀಡು ಪುದ್ದಾರು ಮೆಚ್ಚಿ ನೇಮ ಶ್ರದ್ಧಾ ಭಕ್ತಿಯಿಂದ ನೆರವೇರಿತು. ತುಳುನಾಡಿನಲ್ಲಿ ಪರಂಪರಾಗತವಾಗಿ ಬಂದಿರುವ ಈ ಆರಾಧನಾ ಕಾರ್ಯಕ್ರಮದಲ್ಲಿ ಆಸ್ತಿಕ ಬಂಧುಗಳು ಪಾಲ್ಗೊಂಡು ಶ್ರೀ ಅಣ್ಣಪ್ಪ ಸ್ವಾಮಿಯ ಗಂಧ ಪ್ರಸಾದಗಳನ್ನು ಸ್ವೀಕರಿಸಿದರು.

ನೇಮೋತ್ಸವ ತುಳುನಾಡಿನ ಆರಾಧನಾ ಪರಂಪರೆಯ ಭಾಗವಾಗಿದೆ. ಇದರಲ್ಲಿ ಜನರು ಶ್ರದ್ಢಾ ಭಕ್ತಿಯಿಂದ ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸುತ್ತಾರೆ. ಜನರು ತಮ್ಮ ಸಮಸ್ಯೆಯನ್ನು ದೈವದಲ್ಲಿ ಹೇಳಿಕೊಂಡು ಅಭಯ ಪಡೆಯುತ್ತಾರೆ.

ಏರ್ಯ ಬೀಡಿನಲ್ಲಿ ಭಂಡಾರ ಏರುವುದರೊಂದಿಗೆ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮ ಮರ್ಲ್ ಮಹಿಷಂದಾಯ ಮತ್ತು ಮರ್ಲ್ ಜುಮಾದಿ ನೇಮ ಬಳಿಕ ಅಣ್ಣಪ್ಪ ಸ್ವಾಮಿ ಗಗ್ಗರದೆಚ್ಚಿ, ಅಣ್ಣಪ್ಪ ಸ್ವಾಮಿ ನೇಮದೆಚ್ಚಿ ಮತ್ತು ಜುಮಾದಿ ಬಂಟ ನೇಮ ತದ ನಂತರ ಭಂಡಾರ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.
ಸನ್ಮಾನ:
ಪುದ್ದಾರು ಮೆಚ್ಚಿಯ ಸಂದರ್ಭದಲ್ಲಿ ೨೦೨೩ ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಶೇಖರ ಪಂಬದ ಅವರನ್ನು ಸನ್ಮಾನಿಸಲಾಯಿತು.
ಹಾಗು ಅಣ್ಣಪ್ಪ ಸ್ವಾಮಿ ಮತ್ತು ಪರಿವಾರ ದೈವಗಳ ಸೇವೆಯನ್ನು ಶ್ರಧ್ಧೆಯಿಂದ ಸಲ್ಲಿಸಿಕೊಂಡು ಬಂದಿರುವ ಅಣ್ಣು ಪೂಜಾರಿ ಅವರಿಗೆ ೨೦೨೩ ನೇ ಸಾಲಿನ ಏರ್ಯ ಲಕ್ಷ್ಮೀನಾರಾಯಣ ಆಳ್ವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏರ್ಯ ಗೋಪಿನಾಥ ರೈ, ಏರ್ಯ ಜಗದೀಶ್ ಹೆಗ್ಡೆ, ಏರ್ಯ ರಾಜಾರಾಮ ರೈ, ಏರ್ಯ ಜಯರಾಮ ಹೆಗ್ಡೆ, ಏರ್ಯ ಬಾಲಕೃಷ್ಣ ಹೆಗ್ಡೆ, ವಕೀಲ ಅಶ್ವನಿ ಕುಮಾರ್ ರೈ, ಕುರಿಯಾಳ ರತ್ನಾಕರ ಶೆಟ್ಟಿ, ಏರ್ಯ ಭಕ್ತಿ ಹೆಗ್ಡೆ, ಮೀರಾ ನಾಯಕ್, ಸುಖದಾ ಹೆಗ್ಡೆ, ಪ್ರಭುಸ್ವಾಮಿ, ಕಪ್ಪಣ್ಣ ಉಪಸ್ಥಿತರಿದ್ದರು.