ತುಂಬೆಯಲ್ಲಿ ಮನೆ, ಮನೆಗೆ ಮಂತ್ರಾಕ್ಷತೆ ವಿತರಣೆ
ಬಂಟ್ವಾಳ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ತುಂಬೆ ಗ್ರಾಮದ ಪ್ರತಿ ಹಿಂದೂಗಳ ಮನೆಗೆ ವಿತರಿಸುವ ನಿಟ್ಟಿನಲ್ಲಿ ತುಂಬೆ ಗ್ರಾಮದ ಎಲ್ಲಾ 6 ಉಪವಸತಿಗಳ ಪ್ರಮುಖರಿಗೆ ಮಂತ್ರಾಕ್ಷತೆಯನ್ನು ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕ ಅಭಿಲಾಶ್ ಭಟ್ ಅವರು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮ ಮಂದಿರದ ಉದ್ಘಾಟನೆಯು ಇಡೀ ಭಾರತವೇ ಖುಷಿ ಪಡುವಂತಹ ವಿಷಯ, ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುವಂತೆ ಭಕ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಅಯೋಧ್ಯಾ ಅಭಿಯಾನ ಸಮಿತಿ ಬಂಟ್ವಾಳ ತಾಲೂಕು ಸಹ ಸಂಚಾಲಕ ದಾಮೋದರ್ ನೆತ್ತರಕೆರೆ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟ, ಮಂದಿರ ನಿರ್ಮಾಣಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಯಂ ಸೇವಕರನ್ನು ಸ್ಮರಿಸಿದರು.
ಅಯೋಧ್ಯಾ ಅಭಿಯಾನ ತುಂಬೆ ಗ್ರಾಮ ಸಮಿತಿ ಪ್ರಮುಖ ಸುರೇಶ್ ಕಡೆಗೋಳಿ, ಗಣೇಶ್ ಸುವರ್ಣ ತುಂಬೆ, ಜಗನ್ನಾಥ್ ಸಾಲಿಯಾನ್ ಕೊಟ್ಟಿಂಜ, ವಿಜಯ್ ಕುಮಾರ್ ಕಜೆಕಂಡ, ಹಿಂದೂ ಸಂಘಟನೆ ಪ್ರಮುಖ ಯೋಗೀಶ್ ಕೋಟ್ಯಾನ್ ಕಡೆಗೋಳಿ, ಶಿವಪ್ರಸಾದ್ ಬೊಳ್ಳಾರಿ, ಲತೇಶ್ ರಾಮಲ್ ಕಟ್ಟೆ, ಜೀವನ್ ಆಳ್ವ, ಹಿರಿಯ ಸ್ವಯಂ ಸೇವಕ ದೇವಪ್ಪ ಗೌಡ ಬೊಳ್ಳಾರಿ, ಐತ್ತಪ್ಪ ಕುಲಾಲ್ ಮುದಲ್ಮೆ, ಸೋಮಪ್ಪ ಕೋಟ್ಯಾನ್ ತುಂಬೆ, ಶಶಿಧರ್ ರೊಟ್ಟಿಗುಡ್ಡೆ, ಗೋಪಾಲ್ ಬೆದ್ರಾಡಿ, ಸದಾನಂದ ಕೋಡಿಯಡ್ಕ, ಶ್ರೀನಿವಾಸ್ ಪರ್ಲಕ್ಕೆ, ಮನೋಹರ್ ಕುಂಜತ್ತೂರು, ನಾರಾಯಣ್ ಕೋಟ್ಯಾನ್ ತುಂಬೆ, ಸುಧಾಕರ್ ಕೊಟ್ಟಿಂಜ, ಪುರುಷೋತ್ತಮ ಕೊಟ್ಟಾರಿ ತುಂಬೆ, ಪಂಚಾಯತ್ ಸದಸ್ಯರಾದ ಕಿಶೋರ್ ರಾಮಲ್ ಕಟ್ಟೆ, ಅರುಣ್ ಕುಮಾರ್ ಗಾಣದಲಚ್ಚಿಲು, ತುಂಬೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರು, ಹಿಂದೂ ಜಾಗರಣ ವೇದಿಕೆ ತುಂಬೆ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಕಾರ್ಯಕರ್ತರು, ತುಂಬೆ ಭಾಗ್ಯೋದಯ ಮಿತ್ರ ಕಲಾ ವೃಂದ , ಆಶೀರ್ವಾದ್ ಸೇವಾ ಸಂಘ, ಎಳೆಯರ ಬಳಗ ರಾಮಲ್ ಕಟ್ಟೆ, ಯುವಶಕ್ತಿ ಮಜಿ, ಪಿಲಿ ಚಾಮುಂಡಿ ತಾಯೇಶ್ವರಿ ತಂಜಕರಿಯ, ವಿಶ್ವಜ್ಯೋತಿ ಯುವಕ ಸಂಘ ವಳವೂರು ಇದರ ಅಧ್ಯಕ್ಷ, ಪದಾಧಿಕಾರಿಗಳು, ಸ್ಥಳೀಯ ಬಿಜೆಪಿ ಬೂತ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.