ಕೈಕಂಬ ಪೊಳಲಿ ದ್ವಾರದ ಬಲಿ ಖಾಸಗಿ ಬಸ್ ಪಲ್ಟಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ
ಕೈಕಂಬ:ಮಂಗಳೂರು ತಾಲೂಕಿನ ಬಜಪೆ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಖಾಸಗಿ ಬಸ್ಸೊಂದು ಬ್ರೇಕ್ ಫೈಲ್ ಆಗಿ ಪಲ್ಟಿಯಾಗಿರುವ ಘಟನೆ ಮಂಗಳವಾರ ನಡೆದಿದೆ.

ನವದುರ್ಗಾ ಎಂಬ ಹೆಸರಿನ ಬಸ್ ಚಾಲಕ ಕೈಕಂಬ ಪೊಳಲಿ ದ್ವಾರದಲ್ಲಿ ನಿಲಿಸಿದಾಗ ಬ್ರೇಕ್ ಸಿಗದೇ ಮುಂದಕ್ಕೆ ಚಲಿಸಿದಾಗ ಚಾಲಕನ ಸಮಯ ಪ್ರಜ್ಞೆಯಿಂದ ಬಾಲಕಡೆಗೆ ತಿರುಗಿಸಿ ದೊಡ್ಡ ಅವಘಡ ಸಂಭವಿಸುವುದನ್ನು ತಪ್ಪಿಸಿದ್ದಾನೆ ಎಂದು ತಿಳಿದುಬಂದಿದೆ ಬಸ್ಸಿನಲ್ಲಿ 40ರಿಂದ 50 ರಷ್ಟು ಪ್ರಯಾಣಿಕರು ಇದ್ದರು 6ಮಂದಿಗೆ ಸಣ್ಣ ಪುಟ್ಟ ಗಾಯಗಲಾದ ಪ್ರಯಾಣಿಕರನ್ನು ನಗರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಸುಮಾರು ಒಂದು ಗಂಟೆ ಟ್ರಾಫಿಕ್ ಜಾಮ್ ಉಂಟಾಗಿತ್ತು ಬಜ್ಪೆ ಪೊಲೀಸರು ಜನರನ್ನು ನಿಯಂತ್ರಿ ಸಿದರು.