ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಯೋಜನೆಯಡಿ 13.90 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ವಿವೇಕ ತರಗತಿ ಕೊಠಡಿಯ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಕೆ ಅಣ್ಣು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ನೂತನ ಕೊಠಡಿಯನ್ನು ಉದ್ಘಾಟಿಸಿ ಶುಭಹಾರೈಸಿದರು.

“ಚರಕ ಮಹರ್ಷಿ” ಶಾಲಾ ಆಯುರ್ವೇದಿಕ ವನವನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ, ಶಾಲಾ ಸ್ಮಾರ್ಟ್ ತರಗತಿಯನ್ನು ಮಾಜಿ ಶಾಸಕ ರುಕ್ಮಯ ಪೂಜಾರಿ ಅವರು ಉದ್ಘಾಟಿಸಿದರು.

ಕಲ್ಲಡ್ಕ ಲಕ್ಷ್ಮಿ ಗಣೇಶ್ ಮಾಲಕ ರಾಜೇಂದ್ರ ಎನ್ ಹೊಳ್ಳ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಾಳ್ತಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಂಜಿನಿ, ಪಂಚಾಯತ್ ಸದಸ್ಯರುಗಳಾದ ಲತೇಶ್, ಮಮತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ, ಮಣಿಕಂಠ ಯುವಶಕ್ತಿ ಸಂಘದ ಅಧ್ಯಕ್ಷ ಲೋಕನಾಥ ಏಳ್ತೀಮಾರ್, ಐ ಎ ಎಸ್ ಅಧಿಕಾರಿ ಮುಕುಲ್ ಜೈನ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಧ್ಯಾ, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಸತೀಶ್ ರಾವ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್, ಮಾಜಿ ತಾ. ಪಂ. ಸದಸ್ಯ ದಿನೇಶ್ ಅಮ್ಟೂರು, ಗ್ರಾಮ ಪಂಚಾಯತ್ ಸದಸ್ಯರುಗಳಾದ, ಕುಮಾರಿ ಹಿರಣ್ಮಯಿ, ಮಲ್ಲಿಕಾ ಎನ್ ಎಂ, ಶೋಭಾ ಎನ್, ಹರಿಣಾಕ್ಷಿ, ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಜ್ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಶಾಲೆಗೆ ಸಹಕಾರ ನೀಡಿದ ದಾನಿಗಳಾದ ರಾಜೇಂದ್ರ ಎನ್ ಹೊಳ್ಳ, ಶುಕುರ್ ಸಾಹೇಬ್, ಯೋಗೀಶ್ ಸಾಲಿಯನ್, ಮೊಹಮ್ಮದ್ ನಜೀರ್, ಶೀನ ನಾಯ್ಕ್, ಶಿಲ್ಪಾ, ಮಾಧವ, ಅಬ್ದುಲ್ ರಜಾಕ್, ಪಿ ಕೆ ನವಾಜ್ ಮೊದಲಾದವರನ್ನು ಗೌರವಿಸಲಾಯಿತು.
ಬಳಿಕ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಂದ, ಮಕ್ಕಳ ಪೋಷಕರಿಂದ ಮತ್ತು ಸ್ಥಳೀಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.
ಶಾಲಾ ವಿದ್ಯಾರ್ಥಿನಿ ಪ್ರೇರಣ ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ದೇವಿಕಾ ಬಿ ಸ್ವಾಗತಿಸಿದರು, ಶಿಕ್ಷಕಿ ಮಮತಾ ಸನ್ಮಾನಿತರ ಪಟ್ಟಿ ವಾಚಿಸಿದರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಠಲ ವಂದಿಸಿದರು, ಸಂತೋಷ್ ಬೋಳ್ಪೋಡಿ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ವಿಶಾಲಾಕ್ಷಿ, ಅತಿಥಿ ಶಿಕ್ಷಕಿ ಸುಮಿತ್ರ, ಗೌರವ ಶಿಕ್ಷಕರಾದ ಅಮಿತಾ ದಾಸಕೋಡಿ, ಅಮಿತಾ ಕುದ್ರೆಬೆಟ್ಟು ಸಹಕರಿಸಿದರು.
