ವಿ.ಹಿ. ಪ, ಬಜರಂಗದಳ ವತಿಯಿಂದ ಸಂಕೀರ್ತನ ಯಾತ್ರೆ
ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ದತ್ತಮಾಲ ಅಭಿಯಾನ ಅಂಗವಾಗಿ ಸಂಕೀರ್ತನ ಯಾತ್ರೆ ಬಿ.ಸಿ.ರೋಡಿನಲ್ಲಿ ನಡೆಯಿತು.

ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ವರೆಗೆ ದತ್ತ ಮಾಲಾಧಾರಿಗಳು ಸಂಕೀರ್ತನ ಯಾತ್ರೆಗೈದರು.
ವಿಶ್ಚ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ್, ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಪ್ರಖಂಡ ಕಾರ್ಯದರ್ಶಿ ದೀಪಕ್ ಅಜೆಕಲ, ಸಹ ಕಾರ್ಯದರ್ಶಿ ಚಂದ್ರ ಕಲಾಯಿ, ಪ್ರಖಂಡ ಸಂಯೋಜಕ್ ಶಿವ ಪ್ರಸಾದ್ ತುಂಬೆ, ಸಹಸಂಯೋಜಕ ಕಿರಣ್ ಕಾಪಿಕಾಡು, ಸೇವಾ ಪ್ರಮುಖ್ ಪ್ರಸಾದ್ ಬೆಂಜನಪದವು, ಪ್ರಸಾರ ಪ್ರಮುಖ್ ಪ್ರವೀಣ್ ಕುಂಟಾಲಪಲ್ಕೆ ಮತ್ತಿತರರು ಉಪಸ್ಥಿತರಿದ್ದರು.