ಮಾತೆಯರು ಜಾಗೃತಿಯಾದಾಗ ಲೋಕವು ಜಾಗೃತಿಯಾಗುತ್ತದೆ : ಒಡಿಯೂರು ಶ್ರೀ
ಬಂಟ್ವಾಳ: ಮಾತೆಯರು ಜಾಗೃತಿಯಾದಾಗ ಲೋಕವು ಜಾಗೃತಿಯಾಗುತ್ತದೆ. ತಾಯಿ ಯಾವಾಗ ಗುರು ಆಗುವುದಿಲ್ಲವೊ ಅಲ್ಲಿಯವರೆಗೆ ಭಾರತ ಕೂಡ ಅಭಿವೃದ್ಧಿಯಾಗುವುದಿಲ್ಲ. ಸಮಾಜದಿಂದ ಗಳಿಸಿದನ್ನು ಸಮಾಜಕ್ಕೆ ಅರ್ಪಿಸುವ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಬೇಕು ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಲ್ಲಡ್ಕ ಮತ್ತು ಗೋಳ್ತಮಜಲು ಘಟಕದ ವತಿಯಿಂದ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಸತ್ಯದತ್ತ ವೃತ ಪೂಜೆಯ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನಗೈದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಸಾಮಾಜಿಕ ಕಾರ್ಯಕರ್ತೆ ವೈಶಾಲಿ ಎಮ್.ಕೆ., ಡಾ. ಕಮಲಾ ಪ್ರಭಾಕರ ಭಟ್ ಕಲ್ಲಡ್ಕ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಆರ್.ಪೂಜಾರಿ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ, ಕಲ್ಲಡ್ಕ ವಲಯದ ಮೇಲ್ವಿಚಾರಕರು, ಸೇವಾ ದೀಕ್ಷಿತರು ಉಪಸ್ಥಿತರಿದ್ದರು.
ಘಟಸಮಿತಿಯ ಅಧ್ಯಕ್ಷೆ ಯಮುನಾ ಸ್ವಾಗತಿಸಿದರು. ಸದಸ್ಯೆ ಜಯಂತಿಯರು ಪ್ರಾರ್ಥಿಸಿದರು. ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ ಅವರು ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ವೇ.ಮೂ.ಬ್ರಹ್ಮಶ್ರೀ ಚಂದ್ರಶೇಖರ ಉಪಾಧ್ಯಾಯ ಕುರೋಮೂಲೆ ಅವರ ನೇತೃತ್ವದಲ್ಲಿ ಶ್ರೀ ಸತ್ಯದತ್ತ ವ್ರತಪೂಜೆ ನಡೆಯಿತು. ಮೇಲ್ವಿಚಾರಕಿ ಜಯಲಕ್ಷ್ಮೀ ಪ್ರಭು ವರದಿ ವಾಚಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಲಶೀತ್ ಆರ್.ಶೆಟ್ಟಿ ವಂದಿಸಿದರು.