ಅಯೋಧ್ಯೆಯ ಶ್ರೀರಾಮ ತೀರ್ಥ ಕ್ಷೇತ್ರದ “ಮಂತ್ರಾಕ್ಷತೆ” ಅನಂತಾಡಿ ಗ್ರಾಮಕ್ಕೆ ಆಗಮನ
ಬಂಟ್ವಾಳ: ಅಯೋಧ್ಯೆಯ ಶ್ರೀ ರಾಮ ತೀರ್ಥ ಕ್ಷೇತ್ರವು ಜ.22 ರಂದು ಲೋಕಾರ್ಪಣೆ ಯಾಗಲಿರುವ ಹಿನ್ನಲೆಯಲ್ಲಿ ಕ್ಷೇತ್ರದ “ಮಂತ್ರಾಕ್ಷತೆಯು” ಅನಂತಾಡಿ ಗ್ರಾಮಕ್ಕೆ ಆಗಮಿಸಿದ್ದು ಅನಂತಾಡಿ ಗ್ರಾಮದ ಗೋಳಿಕಟ್ಟೆಯಲ್ಲಿ ಸ್ವಾಗತಿಸಲಾಯಿತು.
ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಸುರೇಶ್ ನೇತೃತ್ವದಲ್ಲಿ ಮಾತೆಯರು ಆರತಿ ಬೆಳಗಿಸಿ ಮಂತ್ರಾಕ್ಷತೆಯನ್ನು ಬರಮಾಡಿಕೊಂಡರು.
ಪುಷ್ಪಾರ್ಚನೆಯ ಬಳಿಕ ವಾದ್ಯ, ಭಜನಾ ಸಂಕೀರ್ತನೆಯೊಂದಿಗೆ ಅನಂತಾಡಿಯ ರಾಜ ರಸ್ತೆಯಲ್ಲಿ ಸಾಗಿದ ಮಂತ್ರಾಕ್ಷತೆ ಮೆರವಣಿಗೆಯು ದೇವಿ ನಗರದ ಶ್ರೀ ದೇವಿ ಭಜನಾ ಮಂದಿರದಲ್ಲಿ ಸಂಪನ್ನಗೊಂಡಿತು.
ಬಳಿಕ ನಡೆದ ವಂದನಾ ಕಾರ್ಯಕ್ರಮದಲ್ಲಿ ರಾಮ ಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ “ಕರಸೇವಕ” ನಾಗಿ ಹೋರಾಟಕ್ಕೆ ಧುಮುಕಿದ್ದ ಮಹೇಂದ್ರ ಗೋಳಿಕಟ್ಟೆ ಮತ್ತು ಕಾಸರಗೋಡು ಪೈವಳಿಕೆ ಗ್ರಾಮದಲ್ಲಿ ಶ್ರೀ ರಾಮಶಿಲಾ ಹೊತ್ತ ತಿರುಮಲೇಶ್ವರ ಭಟ್ ದೇವಿನಗರ ಅವರನ್ನು ಗೌರವಿಸಲಾಯಿತು.
ಸೀತಾರಾಮ ಶೆಟ್ಟಿ ಮತ್ತು ಸನತ್ ಕುಮಾರ್ ರೈ, ಹಿರಿಯರಾದ ಚೆಲುವಮ್ಮ, ತಾ.ಪಂ ಮಾಜಿ ಸದಸ್ಯೆ ಗೀತಾ ಚಂದ್ರಶೇಖರ, ಮಾಲತಿ ಜನಾರ್ದನ ಗೌಡ, ಜ್ಯೋತಿ ಹೆಗಡೆ, ಪ್ರೇಮ ವೆಂಕಟೇಶ್, ಪ್ರೇಮ ಕೇಶವ ಗೋಳಿಕಟ್ಟೆ, ನಳಿನಿ, ನಾಗಮ್ಮ, ಸುರೇಖ, ಪುಷ್ಪಾ ಪೂಜಾರಿ, ಜಯಂತಿ ಮೊದಲಾದವರು ಮೆರವಣಿಗೆಯುದ್ದಕ್ಕೂ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿಂದೂ ಕಾರ್ಯಕರ್ತರು, ಸ್ವಯಂ ಸೇವಕರು, ಊರಿನ ಹಿರಿಯರು ಮತ್ತು ಮಾತೆಯರು ಭಾಗವಹಿಸಿದರು.