ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಸಂಭ್ರಮದಿಂದ ಸೋಮವಾರ ಸಂಪನ್ನಗೊಂಡಿತು.

ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಕೆ. ಸುಂದರ ರಾವ್ ಮತ್ತು ಅರ್ಚಕ ನಾಗೇಶ ರಾವ್ ಅವರು ವೈಧಿಕ ವಿಧಿ ವಿಧಾನ ಹಾಗೂ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.

ಇದೇ ವೇಳೆ ದೇವರ ಬಲಿ, ನೃತ್ಯ ಭಜನೆ ಸಹಿತ ಪಲ್ಲಕಿ ಉತ್ಸವ, ಸಾಮೂಹಿಕ ಆಶ್ಲೇಷ ಬಲಿ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. 

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಸದಸ್ಯರಾದ ರಾಜೇಶ ಗೋವಿಂದಬೆಟ್ಟು, ಶರತ್ ಕುಮಾರ್ ಕೊಯಿಲ, ಆನಂದ ಬುರಾಲು, ಲೋಕೇಶ ಕೈತ್ರೋಡಿ, ನಳಿನಿ ಬದನಡಿ, ಯಮುನಾ ಕೈತ್ರೋಡಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ,  ವಾಸ್ತುಶಿಲ್ಪಿ ಮೋನಪ್ಪ ಆಚಾರ್ಯ ಬೈದಗುತ್ತು, ರಾಯಿ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು,ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಮಾಜಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಹರೀಶ ಆಚಾರ್ಯ ರಾಯಿ, ರತ್ನಾ ಆನಂದ, ಸದಸ್ಯೆ ಶೋಭಾ ಎನ್. ಚಿಂಗಲಚ್ಚಿಲ್, ಸಿದ್ಧಕಟ್ಟೆ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ಸದಸ್ಯ ಕಿರಣ್ ಕುಮಾರ್ ಮಂಜಿಲ, ವಕೀಲ ಸುರೇಶ ಶೆಟ್ಟಿ, ಪ್ರಮುಖರಾದ ಪ್ರಕಾಶ್ ಕುಮಾರ್ ಜೈನ್, ಮೋಹನ್ ಕೆ. ಶ್ರೀಯಾನ್, ಆನಂದ ಪೂಜಾರಿ ಅಂತರ, ಜಗದೀಶ ಕೊಯಿಲ, ದಿನೇಶ ಸುವರ್ಣ, ಚಂದ್ರಶೇಖರ ಆಚಾರ್ಯ, ಮಧುಕರ ಬಂಗೇರ, ರಂಜನ್ ಶೆಟ್ಟಿ ಅರಳ, ಭಜನಾ ಮಂಡಳಿ ಅಧ್ಯಕ್ಷ ಸಂದೇಶ ಕೊಯಿಲ ಮತ್ತಿತರರಿದ್ದರು.

ಕಡಂದಲೆ ಸೋಮನಾಥೇಶ್ವರ ಭಜನಾ ಮಂಡಳಿ ತಂಡವು ಸಾರ್ವಜನಿಕ ಅನ್ನಸಂತರ್ಪಣೆ ವೇಳೆ ಭಜನಾ ಸೇವೆ ಸಲ್ಲಿಸಿದರು.

ಸಂಜೆ ಪರಿವಾರ ದೈವಗಳ ಭಂಡಾರ ಇಳಿದು ಮೈಸಂದಾಯ ದೈವದ ನೇಮ, ಭಜನೆ, ದುರ್ಗಾ ನಮಸ್ಕಾರ ಪೂಜೆ, ರಾತ್ರಿ ರಕ್ತೇಶ್ವರಿ, ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲ ದೈವಗಳ ನೇಮ ನಡೆಯಿತು

By suddi9

Leave a Reply

Your email address will not be published. Required fields are marked *