ಮುಗುಳಿಯ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ
ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮುಗುಳಿಯ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಸೋಮವಾರ ನಾಗತಂಬಿಲ, ಆಶ್ಲೇಷ ಬಲಿ ಹೋಮ, ಆಶ್ಲೇಷ ಬಲಿ ಪೂಜೆ, ಸಾನಿಧ್ಯ ಕಲಶಾಭಿಷೇಕ ಗಣಯಾಗ ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಿತು.
ಬ್ರಹ್ಮಶ್ರೀ ನೀಲೇಶ್ವರ ಕೆ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಸಜೀಪ ಮಾಗಣೆ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್ ಹಾಗೂ ಅರ್ಚಕ ಕೃಷ್ಣ ಭಟ್ ಅವರ ನೇತೃತ್ವದಲ್ಲಿ ವಿವಿಧ ವೈಧಿಕ, ಪೂಜಾ ವಿಧಿವಿಧಾನಗಳು ನೆರೆವೇರಿತು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ, ಸಂಜೆ ಕೂಟ ಮಹಾಜಗತ್ತು ಬಂಟ್ವಾಳ ಮಹಿಳಾ ಸದಸ್ಯರಿಂದ ಭಜನಾ ಸಂಕೀರ್ತನೆ, ರಾತ್ರಿ ರಂಗಪೂಜೆ, ದೇವರಬಲಿ, ಅಶ್ವತ್ಥಕಟ್ಟೆ ದರ್ಶನ, ವಸಂತಕಟ್ಟೆ ದರ್ಶನ ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ವಿತರಣೆಯು ನಡೆಯಿತು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ತುಳುನಾಟಕ ನಡೆಯಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಸದಸ್ಯರಾದ ಎನ್.ಕೆ.ಶಿವ ಖಂಡಿಗ, ಹರಿಪ್ರಸಾದ್ ಭಂಡಾರಿ, ಚಿತ್ರಾವತಿ ಎಸ್ ರೈ, ಚಿತ್ರಾ ಪಿ.ವರಕಾಯ, ಶ್ರೀನಿವಾಸ ನಾಯ್ಕ್ ದಾಸರಗುಡ್ಡೆ, ರಾಜೇಶ್ ಪೂಜಾರಿ ಜುಮಾದಿಪಾಲು, ಸುಮಂತ್ ಮಡಿವಾಳ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಸಜೀಪನಡು: ಅದೇ ರೀತಿ ಸಜೀಪ ನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲು ಷಷ್ಠಿ ಮಹೋತ್ಸವದ ಪ್ರಯುಕ್ತ ನಾಗತಂಬಿಲ ಸಹಿತ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.