ಕೊಡ್ಮಾಣ್: ಅಹೋರಾತ್ರಿ ಶ್ರೀ ರಾಮ ನಾಮ ತಾರಕ ಜಪ ಮಂತ್ರದ ಪಠಣ ಕಾರ್ಯಕ್ರಮ
ಬಂಟ್ವಾಳ: ಕೊಡ್ಮಾಣ್ ಶ್ರೀ ಶಾರದಾ ಪೂಜಾ ಸೇವಾ ವೇದಿಕೆಯ ಅಶ್ರಯದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆಯ ಪ್ರಯುಕ್ತ ಶನಿವಾರ ಸೂರ್ಯಸ್ತದಿಂದ ಭಾನುವಾರ ಸೂರ್ಯೋದಯದವರೆಗೆ ಅಹೋರಾತ್ರಿ ಶ್ರೀ ರಾಮ ನಾಮ ತಾರಕ ಜಪ ಮಂತ್ರದ ಪಠಣ ಕಾರ್ಯಕ್ರಮವು ಕೊಡ್ಮಾಣ್ ಶ್ರೀ ಶಾರದಾ ಪೂಜಾ ಸೇವಾ ವೇದಿಕೆಯ ಸಭಾಂಗಣದಲ್ಲಿ ನಡೆಯಿತು.

ತಾ.ಪಂ. ಮಾಜಿ ಸದಸ್ಯ ವೆಂಕಟೇಶ್ ನಾವಡ ಪೊಳಲಿ ಅವರು ಶ್ರೀರಾಮ ಮಂತ್ರ ಸ್ತುತಿಸುವ ಮೂಲಕ, ದೀಪ ಬೆಳಗಿಸಿ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿವೇಕಾನಂದ ಆಳ್ವ ಕೊಡ್ಮಾಣ್, ಲಕ್ಷ್ಮಿಕಾಂತ್ ನಾಯಕ್, ಕೆ.ಆರ್ ದೇವದಾಸ, ಮುರಾರಿ ಕಾಂಜಿಲಕೋಡಿ, ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ, ನವೀನ ನಾಯ್ಕ್ ಕೊಡ್ಮಾಣ್, ಗೋಪಾಲ ಕುಲಾಲ್ ಗೋವಿಂದೋಟ, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ರಾಮಪ್ಪ ಕಾಪಿಕಾಡ್, ರವೀಂದ್ರ ನಾಯ್ಗ ಪೊನ್ನೊಡಿ, ದಾಮೋದರ ನೆತ್ತರಕೆರೆ, ಹರೀಶ ಕಲ್ಲಜಲ್, ದಿವಾಕರ ಕೊಡ್ಮಾಣ್, ಸವಿತಾ ಮೋಹನ್, ಹರಿನಾಕ್ಷಿ, ಶೈಲಜಾ ಪಿ ಶೆಟ್ಟಿ, ಚಂದ್ರವತಿ ಕಲ್ಲಜಲ್, ಶಾಲಿನಿ ಚಾಪೆ ಮತ್ತಿತರರು ಉಪಸ್ಥಿತರಿದ್ದರು.