ಕೈಕಂಬ: ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್(ರಿ.) ಗಾಂಧಿನಗರ, ಮಂಗಳೂರು ಇವರ ಆಶ್ರಯದಲ್ಲಿ, ಭಾರತೀಯ ಜನತಾ ಪಾರ್ಟಿ ಬಡಗಬೆಳ್ಳೂರು, ತೆಂಕಬೆಳ್ಳೂರು ಗ್ರಾಮ ಸಮಿತಿ ಸಹಯೋಗದೊಂದಿಗೆ ದಿ. ಪ್ರಕಾಶ್‌ ಬೆಳ್ಳೂರು ಸ್ಮರಣಾರ್ಥ ಜಸ್ಟಿಸ್‌ ಕೆ.ಎಸ್.‌ ಹೆಗ್ಡೆ ಚಾರಿಟೇಬಲ್‌ ಆಸ್ಪತ್ರೆ ಹಾಗೂ ಸಮುದಾಯ ದಂತ ವಿಭಾಗ, ಯೇನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಕಣ್ಣಿನ ತಪಾಸಣೆ ಮತ್ತು ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು 17ರಂದು ಭಾನುವಾರ ಬೆಳಿಗ್ಗೆ 9:30ರಿಂದ 12:30ರ ವರೆಗೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಡಗಬೆಳ್ಳೂರಿನಲ್ಲಿ ನಡೆಯಲಿರುವುದು.

ಶಿಬಿರದಲ್ಲಿ ಲಭ್ಯವಿರುವ ಸೇವೆಗಳು:

ಸಾಮಾನ್ಯ ವೈದ್ಯಕೀಯ ವಿಭಾಗ, ನೇತ್ರ ವಿಭಾಗ, ದಂತ ಚಿಕಿತ್ಸೆ ವಿಭಾಗ, ಬಿ.ಪಿ., ಶುಗರ್‌ ತಪಾಸಣೆ, ಕಿವಿ,ಮೂಗು ಮತ್ತು ಗಂಟಲು ವಿಭಾಗ, ಎಲುಬು, ಚರ್ಮ ಮತ್ತು ಮಕ್ಕಳ ವಿಭಾಗ.

ವಿಶೇಷ ಸೂಚನೆ: ಕಣ್ಣಿನ ತಪಾಸಣೆಗೆ ಬರುವವರು ಬೆಳಿಗ್ಗೆ 11:30ರೊಳಗೆ ಶಿಬಿರಕ್ಕೆ ಬಂದು ತಪಾಸಣೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಈಶ್ವರಾಂಬಾ ಟ್ರಸ್ಟ್‌ ನ ಅದ್ಯಕ್ಷರು ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರು ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *