Published On: Sat, Dec 16th, 2023

ರಾಮಕೃಷ್ಣ ತಪೋವನದಲ್ಲಿ ಶ್ರೀ ರಾಮ ಪಟ್ಟಾಭಿಷೇಕ

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯಾ ಪತಿ ಶ್ರೀರಾಮ ಚಂದ್ರರ ಪಟ್ಟಾಭಿಷೇಕವು ದ.17ರಂದು ಭಾನುವಾರ ನಡೆಯಲಿರುವುದು.

ದ.೧೭ರಂದು ಭಾನುವಾರ ಅಪರಾಹ್ನ ೩:೦೦ಗಂಟೆಗೆ ಭವ್ಯ ಶೋಭಾಯಾತ್ರೆಯು ಪೊಳಲಿ ದೇವಸ್ಥಾನದಿಂದ ಹೊರಟು ತಪೋವನದಲ್ಲಿ ಸಂಪನ್ನಗೊಳ್ಳಲಿದೆ.

ಬಳಿಕ ದೇವರಿಗೆ ಪಂಚಮೃತ ಅಭಿಷೇಕ, ಶೋಡಶೋಪಚಾರ ಪೂಜೆ, ರಜತ ಕಿರೀಟ ಧಾರಣೆ ನಡೆಯಲಿದೆ. ಶ್ರೀರಾಮ ಪಟ್ಟಾಭಿಷೇಕದ ನಂತರ ಮಹಾ ಮಂಗಳಾರತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥನೆ ನೆರವೇರಲಿದೆ.

ಈ ಸಂದರ್ಭದಲ್ಲಿ ಪೂಜನೀಯ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು ಸ್ವಾಮಿ ಪ್ರವಚನ ನೀಡಲಿರುವರು.

ವಿಶೇಷ ಸೂಚನೆ: ರಾಮಕೃಷ್ಣ ತಪೋವನದಲ್ಲಿ ಜ.೨೨ರ ವರೆಗೆ ಪ್ರತಿ ದಿನ ಸಂಜೆ ೫:೦೦ರಿಂದ ೬:೦೦ರ ವರೆಗೆ ಹಾಗೂ ೭:೦೦ರಿಂದ ೮:೦೦ರ ವರೆಗೆ ಸಾಮೂಹಿಕ ರಾಮನಾಮ ಜಪ ನಡೆಯುತ್ತಿದ್ದು, ಭಗವದ್ಭಕ್ತರು ಈ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ಸ್ವಾಮೀಜಿ ವಿನಂತಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter