Published On: Wed, Dec 13th, 2023

ಉಡುಪಿ: ಎರ್ಮಲ್ ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಲೀಗ್ – 2023 ಕೋಸ್ಟಲ್ ಸ್ಮ್ಯಾಶರ್ಸ್ ತಂಡ ಚಾಂಪಿಯನ್

ಬಂಟ್ವಾಳ: ಉಡುಪಿಯ ಅಜ್ಜರಕಾಡು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರ್ಮಲ್ ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಲೀಗ್ – 2023ರಲ್ಲಿ ಕೋಸ್ಟಲ್ ಸ್ಮ್ಯಾಶರ್ಸ್ ತಂಡ ಚಾಂಪಿಯನ್ ಆಗಿದೆ. ಈ ಮೂಲಕ ಕೋಸ್ಟಲ್ ಸ್ಮ್ಯಾಶರ್ಸ್ ತಂಡ 2023ರಲ್ಲಿ 8 ಚಾಂಪಿಯನ್ ಕಿರೀಟವನ್ನು ತನ್ನ ಮುಡಿಗೇರಿಸಿದೆ.

ಉಡುಪಿಯ ಅಜ್ಜರಕಾಡು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಡಿ.10ರಂದು ನಡೆದ ಎರ್ಮಲ್ ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಲೀಗ್ – 2023ರಲ್ಲಿ 10 ಮಾಲಕತ್ವದ 50 ತಂಡಗಳು ಭಾಗವಹಿಸಿದ್ದು, ಒಟ್ಟು 110 ಮಂದಿ ಆಟಗಾರರು ಪಾಲ್ಗೊಂಡಿದ್ದರು.

ಈ ಲೀಗ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಕೋಸ್ಟಲ್ ಟಿಂಬರ್ ಆ್ಯಂಡ್ ಪ್ಲೈವುಡ್ ಮಾಲಕ, ಉದ್ಯಮಿ ಮುಹಮ್ಮದ್ ಹನೀಫ್ ಅವರ ಮಾಲಕತ್ವದ ಕೋಸ್ಟಲ್ ಸ್ಮ್ಯಾಶರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಉಡುಪಿ ಅಜ್ಜರಕಾಡು ಇಲ್ಲಿ ನಡೆದ ಲೀಗ್ ಚಾಂಪಿಯನ್ ಶಿಪ್ ನಲ್ಲಿ ಕೋಸ್ಟಲ್ ಸ್ಮ್ಯಾಶರ್ಸ್ ತಂಡದ ಮಾಲಕ ಮುಹಮ್ಮದ್ ಹನೀಫ್, ತಂಡದ ಮ್ಯಾನೇಜರ್ ನೌಸೀರ್ ಸಹಿತ ಮುಹಮ್ಮದ್ ತ್ವೈಫ್, ಶೃಜನ್, ಅರವಿಂದ್ ಭಟ್, ಅಲ್ವಿನ್ ಪಿಂಟೊ, ತೇಜಶ್ವಿ, ಶಶಾಂಕ್, ರೋಗರ್ ಪಿಂಟೊ, ಕೇಶವ್ ನಾಯ್ಕ್ ಮತ್ತು ನಾಸಿರ್ ಕೋಸ್ಟಲ್ ಸ್ಮ್ಯಾಶರ್ಸ್ ತಂಡವನ್ನು ಮುನ್ನಡೆಸಿದರು.

2023ರ ಜನವರಿಯಿಂದ ಡಿಸೆಂಬರ್ 10ರ ವರೆಗೆ, ಮಂಗಳೂರು ಬ್ಯಾರೀಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್, ಯಂಗ್ ಫ್ರೆಂಡ್ಸ್ ಲೀಗ್ ಪಡುಬಿದ್ರೆ, ಸ್ಪೋರ್ಟ್ಸ್ ಗ್ಯಾರೇಜ್ ಬ್ಯಾಡ್ಮಿಂಟನ್ ಲೀಗ್ ಮೊಡಂತ್ಯಾರ್, ಸೂಪರ್ ಸ್ಮ್ಯಾಶರ್ಸ್ ಬ್ಯಾಡ್ಮಿಂಟನ್ ಲೀಗ್ ಪುತ್ತೂರು, ಮೆಗ್ರತ್ ಅರರ್ ಲೀಗ್ ಕಪ್ ಮಂಗಳೂರು, ಎ ಪ್ಲಸ್ ಬ್ಯಾಡ್ಮಿಂಟನ್ ಲೀಗ್ ಕಿನ್ನಿಗೋಳಿ, ದಿ ಫ್ಲೋಟಿಂಗ್ ಶಟಲರ್ಸ್ ಬ್ಯಾಡ್ಮಿಂಟನ್ ಲೀಗ್ ಬಿ.ಸಿ.ರೋಡ್ ಹಾಗೂ ಉಡುಪಿಯ ಅಜ್ಜರಕಾಡು ಇಲ್ಲಿ ನಡೆದ ಎರ್ಮಲ್ ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಕೂಟದಲ್ಲಿ ಕೋಸ್ಟಲ್ ಸ್ಮ್ಯಾಶರ್ಸ್ ತಂಡ ಚಾಂಪಿಯನ್ ಆಗುವ ಮೂಲಕ ಪ್ರಸಕ್ತ ವರ್ಷ ಎಂಟು ಚಾಂಪಿಯನ್ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ವೇಳೆ ಮಾತನಾಡಿದ ಕೋಸ್ಟಲ್ ಸ್ಮ್ಯಾಶರ್ಸ್ ತಂಡದ ಮಾಲಕ, ಉದ್ಯಮಿ ಮುಹಮ್ಮದ್ ಹನೀಫ್ ಅವರು, ಉಡುಪಿಯ ಅಜ್ಜರಕಾಡು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರ್ಮಲ್ ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಲೀಗ್ – 2023ರಲ್ಲಿ ಕೋಸ್ಟಲ್ ಸ್ಮ್ಯಾಶರ್ಸ್ ತಂಡ ಚಾಂಪಿಯನ್ ಆಗಿದೆ. ಈ ಮೂಲಕ ಕೋಸ್ಟಲ್ ಸ್ಮ್ಯಾಶರ್ಸ್ ತಂಡ 2023ರಲ್ಲಿ ರಾಜ್ಯದ ವಿವಿಧೆಡೆ ನಡೆದ ಬ್ಯಾಡ್ಮಿಂಟನ್ ಲೀಗ್‌ನಲ್ಲಿ 8 ಕಡೆ ಚಾಂಪಿಯನ್ ಆಗಿರುವುದು ಸಂತಸ ತಂದಿದೆ ಎಂದರು.

ರಾಜ್ಯದ ವಿವಿಧೆಡೆ ನಡೆಯುವ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ನಾವು ಭಾಗವಹಿಸಿದ್ದು ನಮ್ಮ ತಂಡದ ಪ್ರತಿಯೊಂದು ಸದಸ್ಯರ ಉತ್ತಮ ಪ್ರದರ್ಶನದಿಂದ ನಮ್ಮ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲು ಸಾಧ್ಯವಾಗಿದೆ. ನಮ್ಮ ತಂಡದ ಎಲ್ಲಾ ಆಟಗಾರರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

ಕ್ರೀಡಾ ಪ್ರೇಮಿ ಶಮೀರ್ ಅವರು ಬಿ.ಸಿ.ರೋಡ್ ಕೈಕಂಬ ಸಮೀಪದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪ್ಪೊದ ಬಳಿ ಸುಸಜ್ಜಿತವಾದ ಅಂತರ್ ರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ (ಶ್ಯಾಡೋ ಸ್ಪೋರ್ಟ್ಸ್ ಅಕಾಡಮಿ)ವನ್ನು ನಿರ್ಮಿಸಿದ್ದಾರೆ.

ಯುವ ಕ್ರೀಡಾ ಪಟುಗಳಿಗೆ ಅಭ್ಯಾಸ ನಡೆಸಲು ಈ ಕ್ರೀಡಾಂಗಣ ಸೂಕ್ತ ವೇದಿಕೆಯಾಗಿದೆ. ಇಲ್ಲಿ ತಮ್ಮ ತಂಡ ಬ್ಯಾಡ್ಮಿಂಟನ್ ತರಬೇತಿ ಮತ್ತು ಅಭ್ಯಾಸ ನಡೆಸುತ್ತಿದ್ದು ತಂಡದ ಸದಸ್ಯರಿಗೆ ಇನ್ನಷ್ಟು ತರಬೇತಿ ನೀಡುವ ಮೂಲಕ ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಲೀಗ್ ಕೂಟದಲ್ಲಿ ಭಾಗವಹಿಸಲಾಗವುದು ಎಂದು ಅವರು ಹೇಳಿದರು.

ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಇರುವ ಯುವ ಕ್ರೀಡಾ ಪಟುಗಳಿಗೆ ತರಬೇತಿ ಪಡೆಯಲು ಶ್ಯಾಡೋ ಸ್ಪೋರ್ಟ್ಸ್ ಅಕಾಡಮಿ ಉತ್ತಮ ವೇದಿಕೆಯಾಗಿದೆ. ಇಲ್ಲಿ ಅಭ್ಯಾಸ ನಡೆಸಿ ರಾಜ್ಯ, ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬಹುದಾಗಿದೆ ಎಂದು ಕೋಸ್ಟಲ್ ಸ್ಮ್ಯಾಶರ್ಸ್ ತಂಡದ ಮಾಲಕ ಮುಹಮ್ಮದ್ ಹನೀಫ್ ತಿಳಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter