ಬಂಟ್ವಾಳ: ಹಳೆಯ ಕಟ್ಟಡದ ಮೇಲ್ಛಾವಣಿ ಕೆಡವುವ ವೇಳೆ ಕೆಳಗೆ ಬಿದ್ದು ಕಂಬಳ ಕೋಣಗಳ ಯಜಮಾನರೋರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಕಜೆಕಾರು ಎಂಬಲ್ಲಿ ಸಂಭವಿಸಿದೆ.

ಬಡಗ ಕಜೆಕಾರು ಗ್ರಾಮದ ಕುಲೆಂಜಿಕೋಡಿ ನಿವಾಸಿ ಸುಂದರ ಪೂಜಾರಿ(೫೫) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸುಂದರ ಪೂಜಾರಿ ಅವರು ತೆಂಕಕಜೆಕಾರಿನಲ್ಲಿ ದೈವಸ್ಥಾನವೊಂದರ ಕಟ್ಟಡ ಕೆಡವುವ ಕೆಲಸಕ್ಕೆ ಹೋಗಿದ್ದು, ಗೋಡೆಯ ಮೇಲಿನಿಂದ ಸ್ಲ್ಯಾಬ್ ತೆಗೆಯುವ ವೇಳೆ ಸ್ಲ್ಯಾಬ್ ಸಹಿತ ಕೆಳಕ್ಕೆ ಬಿದ್ದಿದ್ದರೆನ್ನಲಾಗಿದೆ.

ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದರು. 

ಈ ಘಟನೆ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಂಬಳ ಕೋಣಗಳ ಯಜಮಾನರು: ಸುಂದರ ಪೂಜಾರಿ ಅವರು ಕಳೆದ ೬ ವರ್ಷಗಳಿಂದ  ಕಂಬಳ ಕೋಣಗಳ ಯಜಮಾನರಾಗಿದ್ದು ಅವರ ಓಟದ ಕೋಣಗಳು ಹಲವಾರು ಪ್ರಶಸ್ತಿ ಪಡೆದಿದ್ದವು

By suddi9

Leave a Reply

Your email address will not be published. Required fields are marked *