ಮಳಲಿ ಮಟ್ಟಿ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ರಚನೆ: ಅಧ್ಯಕ್ಷರಾಗಿ ಕಿರಣ್ ಪಕ್ಕಲ ಆಯ್ಕೆ
ಕೈಕಂಬ: ಮಂಗಳೂರು ತಾಲೂಕಿನ ಮಳಲಿ ಮಟ್ಟಿ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದ್ದು, ಮುಂದಿನ ಫೆಬ್ರವರಿ 20 ರಿಂದ ಜರಗಲಿರುವ ಬ್ರಹ್ಮ ಕಲಶೋತ್ಸವಕ್ಕೆ ಪೂರ್ವಭಾವಿಯಾಗಿ, ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಜೋಗಿ, ಆಡಳಿತ ಸಮಿತಿಯ ಅಧ್ಯಕ್ಷ ಉಮೇಶ್ ನಾಥ ಕದ್ರಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶೇಖರ್ ಜೋಗಿ ಮತ್ತು ಸದಸ್ಯ ಸತೀಶ್ ಜೋಗಿ ಮಾಲೆಮಾರ್ ಉಪಸ್ಥಿತಿಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯನ್ನು ರಚಿಸಲಾಯಿತು.
ಶಾಸಕರುಗಳ ಗೌರವಾಧ್ಯಕ್ಷತೆಯಲ್ಲಿ, ಅಧ್ಯಕ್ಷರಾಗಿ ಕಿರಣ್ ಪಕ್ಕಲ ಪೆರ್ಮಂಕಿ ಗುತ್ತು, ಕಾರ್ಯಾಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ನಾರಳ, ಪ್ರಧಾನ ಕಾರ್ಯದರ್ಶಿ ಹರೀಶ್ ಮಟ್ಟಿ, ಕೋಶಾಧಿಕಾರಿಗಳಾಗಿ ಜಯಂತ್ ಆಚಾರ್ಯ, ಯತೀಶ್ ಶೆಟ್ಟಿ ಮಟ್ಟಿ, ಕುಮಾರ್ ಚಂದ್ರ ಶೆಟ್ಟಿ ಮಟ್ಟಿ, ಜತೆ ಕಾರ್ಯದರ್ಶಿಗಳಾಗಿ ಅಶೋಕ್ ಸುವರ್ಣ ಮಟ್ಟಿ, ದಿನೇಶ್ ಜೋಗಿ, ಶುಭಾ ಸುರೇಶ್ ಜೋಗಿ ಮತ್ತು ವಿಶಾಲಾಕ್ಷಿಯವರನ್ನು ಆಯ್ಕೆ ಮಾಡಲಾಯಿತು. ಮತ್ತು ಸಮಿತಿಗೆ ಉಪಾಧ್ಯಕ್ಷರುಗಳನ್ನು ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.