ಮದುವೆಗೆ ತೆರಳುವ ವೇಳೆ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರ ಸಾವು
ಕೈಕಂಬ:ಕಿನ್ನಿಕಂಬಳದ ಕುಟುಂಬವು ಮದುವೆ ಸಮಾರಂಭಕ್ಕೆ ತೆರಳಿ ಕುಮಟಾದಿಂದ ಶಿರಸಿಗೆ ಹಿಂದಿರುಗಿ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಹುಬ್ಬಳ್ಳಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿಸಿ ಬಸ್, ೮ರಂದು ಶುಕ್ರವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗುರುಪುರ ಕೈಕಂಬ ಮೂಲದ ಕಿನ್ನಿಕಂಬಳದ ನಿವಾಸಿಗಳಾದ ರಾಮಕೃಷ್ಣ ರಾವ್(೭೧) ಅವರ ಧರ್ಮಪತ್ನಿ ವಿದ್ಯಾಲಕ್ಷ್ಮೀ ರಾಮಕೃಷ್ಣರಾವ್(೬೭), ಮುಚ್ಚೂರು ಮೂಲದ ಪುಷ್ಪಾ ಮೋಹನ್ ರಾವ್(೬೨), ಸುಹಾಸ್ ಗಣೇಶ್ ರಾವ್(೩೦) ಇನ್ಫೋಸಿಸ್‌ನಲ್ಲಿ ಎಂಜಿನಿಯರ್ ಆಗಿದ್ದರು, ಸುರತ್ಕಲ್ ಮೂಲದ ಚೆನೈ ನಲ್ಲಿ ಉದ್ಯೋಗದಲ್ಲಿದ್ದ ಡಾ. ಅರವಿಂದ ಮೃತರು ಎನ್ನಲಾಗಿದೆ.
ಇವರುಗಳು ಸ್ವಿಪ್ಟ್ ಕಾರಿನಲ್ಲಿ ಮದುವೆ ಸಮಾರಂಭಕ್ಕೆ ತೆರಳಿ ವಾಪಸ್ ಬರುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಬಂಡಲ ಗ್ರಾಮದಲ್ಲಿ ಕಾರು ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಡುವೆ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೆ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ಸಿನ ಮುಂಭಾಗವೂ ಸಂಪೂರ್ಣ ಜಖಂಗೊಂಡಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.