ತಾಳಮದ್ದಳೆ ಅಭಿಯಾನ 75 ರ ಸಂಭ್ರಮ
ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ) ಮುಡಿಪು, ತುಳಸಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ಇವುಗಳ ಸಂಯುಕ್ತಾಶ್ರಯದಲ್ಲಿ ಯಕ್ಷ ತ್ರಿವೇಣಿ ಯಕ್ಷಗಾನ ತಾಳಮದ್ದಳೆ ಅಭಿಯಾನ 75 ರ ಸಂಭ್ರಮ ಬಿ.ಸಿ. ರೋಡು ಶಿವಳ್ಳಿ ಸಭಾಭವನದಲ್ಲಿ ಜರಗಿತು.
ಹಿರಿಯ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಸಭಾಧ್ಯಕ್ಷತೆಯನ್ನು ಸಜಿಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಎಂ ಪರಮೇಶ್ವರ ಹೊಳ್ಳ ಅತಿಥಿಯಾಗಿ ಭಾಗವಹಿಸಿದ್ದರು.
ಬಳಿಕ ಪ್ರಶಾಂತ್ ಹೊಳ್ಳ ಅವರ ನೇತೃತ್ವದಲ್ಲಿ ಪುರುಷೋತ್ತಮ ಭಟ್, ಮುರಾರಿ ಕಡಂಬಳಿ ರಾಯ, ಶಂಬು ಶರ್ಮ ವಿಟ್ಲ, ನಾ.ಕಾರಂತ ಪೆರಾಜೆ, ಕುಶಲ ಮಡಿಪು ಅವರನ್ನೊಳಗೊಂಡ ಕಲಾವಿದರಿಂದ “ಸುಧನ್ವಾರ್ಜುನ” ತಾಳ ಮದ್ದಳೆ ನಡೆಯಿತು.