ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ಅಧ್ಯಕ್ಷರಾಗಿ ಯಶೋಧರ ಶೆಟ್ಟಿ ಆಯ್ಕೆ
ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ನೂತನ ಅಧ್ಯಕ್ಷರಾಗಿ ಯಶೋಧರ ಶೆಟ್ಟಿ ದಂಡೆ ಅವರು ಆಯ್ಕೆಯಾಗಿದ್ದಾರೆ.

ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಭವನದಲ್ಲಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ನಡೆಸಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ಚಂದ್ರ ಶೆಟ್ಟಿಗಾರ್, ಮಾರ್ಗದರ್ಶಕರಾಗಿ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಗೌರವಾಧ್ಯಕ್ಷರಾಗಿ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಉಪಾಧ್ಯಕ್ಷರಾಗಿ ಹರೀಶ್ ಪ್ರಭು, ಅಶೋಕ್ ಗುಂಡಿಯಲ್ಕೆ, ಜತೆ ಕಾರ್ಯದರ್ಶಿಯಾಗಿ ಯೋಗೀಶ್ ಪೂಜಾರಿ ಕುಕ್ಕಳ, ಕೋಶಾಕಾರಿಯಾಗಿ ಉದಯ ಕುಮಾರ್ ಶೆಟ್ಟಿ ಮೇಲ್ಮನೆ, ಸಂಚಾಲಕರಾಗಿ ರಮೇಶ್ ಶೆಟ್ಟಿ ಮಜಲೋಡಿ, ಸಹ ಸಂಚಾಲಕರಾಗಿ ಪಿ.ಎಂ. ಪ್ರಭಾಕರ, ಕಾರ್ಯಕಾರಿ ಸದಸ್ಯರಾಗಿ ದಿವಾಕರ್ ದಾಸ್ ಕಾವಳ ಕಟ್ಟೆ, ಮಂಜಪ್ಪ ಮೂಲ್ಯ ಅತ್ತಾಜೆ, ಅಜಿತ್ ಶೆಟ್ಟಿ ಕಾರಿಂಜ, ವಿನೋದ್ ಶೆಟ್ಟಿ ಪರನೀರ್, ಸುದೀಪ್ ಕುಮಾರ್ ಜೈನ್, ಕಿಶೋರ್ ಶೆಟ್ಟಿ ಮೂಡಾಯೂರು, ದಿವಾಕರ್ ಶೆಟ್ಟಿ ಕಂಗಿತ್ತಿಲು, ಲೋಹಿತ್ ಪೂಜಾರಿ ಮನ್ಯ, ಪ್ರಶಾಂತ್ ಶೆಟ್ಟಿ ಪೆರುವಾರ್, ಸೀತಾರಾಮ್ ಶೆಟ್ಟಿಗಾರ್, ಚಂದ್ರಶೇಖರ ಶೆಟ್ಟಿ ಕುಮಂಗಿಲ, ಸತೀಶ್ ಆಚಾರ್ಯ ಬೆರ್ಕಳ, ದಿನೇಶ್ ಶೆಟ್ಟಿ ದಂಬೆದಾರ್, ಮಹಾಬಲ ಶೆಟ್ಟಿ ಕುಂಡೊಟ್ಟು, ಪ್ರವೀಣ್ ಶೆಟ್ಟಿ ಕುರ್ಡುಮೆ, ನವೀನ್ ಶೆಟ್ಟಿ ಸೇವಾ ಅವರನ್ನು ಆಯ್ಕೆ ಮಾಡಲಾಯಿತು. ಡಿ.೨೫ ರಂದು ಘಟಕದ ೬ ನೇ ವಾರ್ಷಿಕೋತ್ಸವ ನಡೆಯಲಿದೆ.