ಸುವರ್ಣ ನಾಡಿನಿಂದ ಪೊಳಲಿಗೆ ಪಾದಯಾತ್ರೆ
ಬಂಟ್ವಾಳ: ಹಿಂದು ಜಾಗರಣ ವೇದಿಕೆ ಸುವರ್ಣನಾಡು ಘಟಕದ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮತ್ತು ಸಕಲ ಇಷ್ಟಾರ್ಥ ಸಿದ್ದಿಗಾಗಿ ಐದನೇ ವರ್ಷದ ಪಾದಯಾತ್ರೆ (ಧರ್ಮ ಜಾಗೃತಿ ನಡೆ) ಶ್ರಿ ದುರ್ಗಾಂಬಿಕಾ ಸಿದ್ದೇಶ್ವರಿ ದೇವಸ್ಥಾನದಿಂದ ಪ್ರಾರ್ಥನೆಯ ಮೂಲಕ ಆರಂಭವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.
ಈ ಪ್ರಯುಕ್ತ ಪೊಳಲಿ ಶ್ರಿ ರಾಮಕೃಷ್ಣ ತಪೋವನದಲ್ಲಿ ನಡೆದ ಧರ್ಮ ಜಾಗೃತಿ ಸಭೆಯನ್ನು ಮಂಗಳೂರಿನ ನ್ಯಾಯವಾದಿ ಕಿಶೋರ್ ಕುಮಾರ್ ಬೌದ್ಧಿಕ್ ನಡೆಸಿಕೊಟ್ಟರು.
ಹಿ.ಜಾ.ವೇ.ಯ ಪ್ರಾಂತ ಕಾರ್ಯಕಾರಿಣಿ ಸದಸ್ಯರು, ಬಂಟ್ವಾಳ ತಾಲೂಕು ಸಂಯೋಜಕರಾದ ಹರೀಶ್ ತಲೆಂಬಿಲ, ಹಿ. ಜಾ. ವೇ.ಯ ಮಂಗಳೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ತಿರುಲೇಶ್ ಬೆಳ್ಳೂರು, ಹಿ. ಜಾ. ವೇ.ಯ ಬಂಟ್ವಾಳ ತಾಲೂಕು ಕಾರ್ಯಕಾರಣಿ ಸದಸ್ಯರಾದ ಪುಷ್ಪರಾಜ್ ಕಮ್ಮಾಜೆ, ವೇದಾನಂದ ಕಾರಂತ್, ಸುರೇಶ್ ಸುವರ್ಣನಾಡು, ಬಾಲಕೃಷ್ಣ ಸುವರ್ಣನಾಡು, ಸಂಜೀವ ಪೂಜಾರಿ ಸುವರ್ಣನಾಡು, ಗುಣವತಿ ಸುವರ್ಣನಾಡು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಸೇವಾ ಪ್ರಮುಖ ಅರುಣ್ ಅರಳ ಮುತ್ತಿತರರು ಉಪಸ್ಥಿತರಿದ್ದರು. ನೀಕ್ಷಾ ಸುವರ್ಣನಾಡು ಸ್ವಾಗತಿಸಿದರು. ಸಂತೋಷ್ ಸುವರ್ಣನಾಡು ವಂದಿಸಿದರು.