ಪಾಂಗಲ್ಪಾಡಿ ದೇವಸ್ಥಾನದಲ್ಲಿ ಸಂಭ್ರಮದ ದೀಪೋತ್ಸವ, ಗಮನ ಸೆಳೆದ ರಾಮ ಮಂದಿರ
ಬಂಟ್ವಾಳ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಹುಣ್ಣಿಮೆ ಪ್ರಯುಕ್ತ “ಪಾಂಗಲ್ಪಾಡಿ ದೀಪೋತ್ಸವ” ಹಾಗೂ “ರಂಗಪೂಜೆ” ಸೋಮವಾರ ರಾತ್ರಿ ಸಂಭ್ರಮದಿಂದ ಜರಗಿತು.

ಗಾಯಕರಾದ ನಾದ ಮಣಿನಾಲ್ಕೂರು ಇವರಿಂದ ಏಕತಾರಿ(ತಂಬೂರಿ)ಯೊಂದಿಗೆ ‘ಕತ್ತಲ ಹಾಡು’ ಗಾಯನ ನಡೆಯಿತು. ದೀಪೋತ್ಸವ ಪ್ರಯುಕ್ತ ದೇವಳದ ಹೊರಾಂಗಣದ ಸುತ್ತ ಹಾಗೂ ಒಳಾಂಗಣದಲ್ಲಿ ಜೋಡಿಸಲಾದ ದೀಪಗಳನ್ನು ನೆರೆದ ಭಕ್ತರು ಪ್ರಜ್ವಲಿಸಿದರು.
ದೇವಳದ ಮುಂಭಾಗದಲ್ಲಿ ರಂಗೋಲಿಯಲ್ಲಿ ರಚಿಸಲಾದ ಅಯೋಧ್ಯಾ ಶ್ರೀರಾಮ ಮಂದಿರ ಗಮನ ಸೆಳೆಯಿತು. ತಂತ್ರಿಗಳಾದ ಉದಯ ಪಾಂಗಣ್ಣಾಯ ಅವರ ಮಾರ್ಗದರ್ಶನದಲ್ಲಿ ಅರ್ಚಕ ವಾಸುದೇವ ಆಚಾರ್ಯ ಅವರ ನೇತೃತ್ವದಲ್ಲಿ ರಂಗಪೂಜೆ ಸಹಿತ ವೈಧಿಕ ವಿಧಿವಿಧಾನಗಳು ನಢಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಸದಸ್ಯರಾದ ಪ್ರಕಾಶ್ ಶೆಟ್ಟಿ ಅಲಕ್ಕಿ, ಸಂತೋಷ್ ಕುಮಾರ್ ಶೆಟ್ಟಿ ಕುಂಟಜಾಲು, ಶೇಖರ ಪೂಜಾರಿ ಅಗಲ್ದೋಡಿ, ಪ್ರಶಾಂತ ದೇವಾಡಿಗ, ರಮೇಶ್ ನಾಯ್ಕ್, ವೇದಾವತಿ ಪಾಂಗಣ್ಣಾಯ, ಜನನಿ ಇರ್ವತ್ತೂರು, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಆಚಾರ್ಯ, ಸದಸ್ಯ ಸತೀಶ್ ಕರ್ಕೇರ ಮೊದಲಾದವರಿದ್ದರು.