ಬಂಟ್ವಾಳ: ಕುಲಾಲ ಸಂಘದಿಂದ”ತುಡರ್ ಪರ್ಬದ ಐಸಿರ – ೨೦೨೩”
ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ವತಿಯಿಂದ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ” ತುಡರ್ ಪರ್ಬದ ಐಸಿರ ೨೦೨೩” ನಡೆಯಿತು.
ಬಂಟ್ವಾಳ ತಾಲೂಕು ಕುಲಾಲ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ವಹಿಸಿದ್ದರು.
ಸಾಮಾಜಿಕ ಕಾರ್ಯಕರ್ತ ಶೇಖರ್ ಬಿ., ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ, ಸೇವಾದಳಪತಿ ರಾಜೇಶ್ ಕುಮಾರ್ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ದೀಪಾವಳಿ ಸಂದರ್ಭ ನಡೆದ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ, ಮಕ್ಕಳಿಂದ ಕುಣಿತ ಭಜನೆ, ಮಹಿಳೆಯರಿಂದ ಭಜನೆ, ಗೂಡುದೀಪ ಸ್ರರ್ಧೆ, ಅವಲಕ್ಕಿ ತಯಾರಿ ಸ್ಪರ್ಧೆ ಮತ್ತು ಸಾಮೂಹಿಕ ದೀಪಾವಳಿ ಆಚರಣೆ ಕಾರ್ಯಕ್ರಮ ನಡೆಯಿತು.
ಸೇವಾದಳದ ಸದಸ್ಯ ರಾಘವೇಂದ್ರ ಕಾಮಾಜೆ ಸ್ವಾಗತಿಸಿದರು, ದೇವದಾಸ ಅಗ್ರಬೈಲು ಪ್ರಸ್ತಾವನೆಗೈದರು. ರಾಜೇಶ್ ಭಂಡಾರಿಬೆಟ್ಟು ವಂದಿಸಿದರು.
ಗಣೇಶ್ ಕುಲಾಲ್ ಬೆದ್ರಗುಡ್ಡೆ, ದರ್ಶನ್ ಮೊಡಂಕಾಪು, ಯಾದವ ಅಗ್ರಬೈಲು, ಮಚ್ಚೇಂದ್ರ ಸಾಲ್ಯಾನ್, ತಾರನಾಥ ಮೊಡಂಕಾಪು, ಗಣೇಶ್ ಕುಲಾಲ್ ಮೊಡಂಕಾಪು ಪ್ರೇಮನಾಥ ನೇರಂಬೋಳು ಸಹಕರಿಸಿದರು. ಕಾರ್ಯದರ್ಶಿ ಜಯಂತ ಅಗ್ರಬೈಲು ಕಾರ್ಯಕ್ರಮ ನಿರೂಪಿಸಿದರು.