ದೀಪಾವಳಿ ಹಬ್ಬದ ಪ್ರಯುಕ್ತ ಸಾಮರಸ್ಯದ ತುಡರ್ ಕಾರ್ಯಕ್ರಮ
ಕೈಕಂಬ: ದೀಪಾವಳಿ ಹಬ್ಬದ ಪ್ರಯುಕ್ತ ಸಾಮರಸ್ಯ ವೇದಿಕೆಯ ವತಿಯಿಂದ ತುಡರ್ ಕಾರ್ಯಕ್ರಮವು ಪೊಳಲಿಯಲ್ಲಿ ನಡೆಯಿತು. ಪೊಳಲಿ ರಾಜರಾಜೇಶ್ವರಿ ಅಮ್ಮನವರ ಸನ್ನಿದಾನದಿಂದ ದೀಪವನ್ನು ಬೆಳಗಿ ಕಿನ್ನಿಗುಡ್ಡೆ ಸಂಕಪ್ಪ ರವರ ಮನೆಗೆ ಮೆರವಣಿಗೆಯ ಮುಖಾಂತರ ಸಾಗಿ ಸಂಕಪ್ಪರವರ ಮನೆಯ ದೇವರ ದೀಪವನ್ನು ರಾಮಕೃಷ್ಣ ತಪೋವನದ ಪೂಜ್ಯ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಬೆಳಗಿ ಪ್ರಮುಖರ ಜೊತೆಗೂಡಿ ಗೋ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಉಪನ್ಯಾಸಕರು, ದೈವನರ್ತಕರಾದ ಡಾ.ರವೀಶ್ ಪಡುಮಲೆ ಇವರು ತುಡರ್ ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವೆಂಕಟೇಶ್ ನಾವಡ ಪೊಳಲಿ, ಹಾಗೂ ಮನೆಯ ಯಜಮಾನ ಸಂಕಪ್ಪ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಕಾರ್ಯವಾಹರಾದ ಜಗದೀಶ್ ಬಡಗಬೆಳ್ಳೂರು, ಸಂಘದ ಪ್ರಮುಖರಾದ ಯುವರಾಜ್ ಪೂಂಜ, ಸಂದೀಪ್ ಕಮ್ಮಾಜೆ, ಜಯಂತ್ ಮಣಿಕಂಠಪುರ, ಪ್ರೀತಮ್ ಬಡಕಬೈಲ್, ಸೋಮಶೇಖರ್, ಚಂದ್ರಶೇಖರ ಶೆಟ್ಟಿ ಬಡಕಬೈಲ್, ಸುರೇಶ ಬೆoಜನಪದವು,ಪ್ರೇಮ್ ಕರಿಯoಗಳ, ಕೃಷ್ಣ ಕಲ್ಕುಟ, ರಮೇಶ್ ಬಟ್ಟಾಜೆ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಯಶವಂತ ಕೋಟ್ಯಾನ್ ಪೊಳಲಿ, ಅಮ್ಮುoಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದಕೃಷ್ಣ ತಂತ್ರಿ, ಬಿಜೆಪಿ ಯುವಮೋರ್ಚ ಬಂಟ್ವಾಳ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ, ಲೋಕೇಶ್ ಸಾಣೂರು ಪದವು, ಸನತ್ ಗಾಣೆಮಾರ್ ಮತ್ತಿತರರು ಉಪಸ್ಥಿತರಿದ್ದರು.