ಕಂಬಳ ಒಂದು ಜನಪದ ಕ್ರೀಡೆ. ಜಲ್ಲಿಕಟ್ಟು ಆಚರಣೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇದನ್ನು ನಿಷೇಧಿಸಿದೆ. ಕಂಬಳಕ್ಕೆ ಮತ್ತೆ ಅವಕಾಶ ಕೊಡಬೇಕೆಂಬ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತವೆ. ಕಂಬಳ ನಿಷೇಧವಾಗಬಾರದು ಎಂದು ತುಳುವರ ಅಭಿಮತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಂಬಳ ಯಾವಮಟ್ಟಕ್ಕೆ ಇಳಿದಿದೆ ಎಂದರೆ ಕಂಬಳ ನಿಷೇಧವಾಗುವುದೇ ಉತ್ತಮ ಎಂಬ ಮಾತನ್ನು ಹೆಚ್ಚಿನವರು ಹೇಳುತ್ತಾರೆ.
ಕಂಬಳಕ್ಕೆ ಓಡಿಸುವ ಕೋಣಗಳನ್ನು ಉಳುಮೆಗೆ ಉಪಯೋಗಿಸುವುದಿಲ್ಲ. ಇವುಗಳನ್ನು ಸಾಕಲು ಒಬ್ಬ ಆಳುವೇ ಬೇಕಾಗುತ್ತದೆ. ಅಲ್ಲದೆ ಇದಕ್ಕೆ ತಿನ್ನಿಸಲು ದಿನವೊಂದಕ್ಕೆ ಸಾವಿರಾರು ರೂ ಖರ್ಚು ಮಾಡುವ ಜನರೂ ಇದ್ದಾರೆ. ಇವುಗಳನ್ನು ನಿತ್ಯವೂ ಪಳಗಿಸಿ ಅದನ್ನು ಕಂಬಳದ ಕೋಣಗಳನ್ನಾಗಿ ಬದಲಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ.
ಕೋಣಗಳು ಸಹ ನಾಯಿಯಂತೆ ತನ್ನ ಯಜಮಾನನನ್ನು ಪ್ರೀತಿಸುತ್ತದೆ. ಯಜಮಾನ ಹೂಂ, ಓಬ ಎಂದು ಹೇಳಿದರೆ ಸಾಕು. ಆನೆಯಷ್ಟು ದೊಡ್ಡದ ಕೋಣಗಳೂ ಸಹ ಯಜಮಾನನ ಮಾತನ್ನು ಚಾಚೂ ತಪ್ಪದೆ ಕೇಳುತ್ತದೆ. ಕೆಲವು ಕೋಣಗಳಿಗೆ ತಾನು ಓಟದಲ್ಲಿ ಗೆಲ್ಲಬೇಕೆಂದು ಗೊತ್ತಿರುತ್ತದೆ. ತನಗೆ ಸಿಕ್ಕ ತರಬೇತಿಗೆ ಅನುಗುಣವಾಗಿ ತನ್ನ ಸಾಮರ್ಥ್ಯವನ್ನು ಪ್ರದಶರ್ಿಸುವ ಕೋಣಗಳು ಕಂಬಳದಲ್ಲಿ ಗೆಲ್ಲುತ್ತದೆ.
ಜನಪದ ಕ್ರೀಡೆ ಎಂದು ಕಂಬಲ ನಡೆಯುವ ಪ್ರದೇಶಕ್ಕೆ ಬಂದರೆ ಅಲ್ಲಿ ನಡೆಯುವುದೇ ಬೇರೆ. ಕಂಬಳದ ಗದ್ದೆಯಲ್ಲಿ ಕುಡಿದು ಚಿತ್ತಾಗಿ ತೂರಾಡುವವರೇ ಜಾಸ್ತಿ. ಯಾವ ಭಾಗದಲ್ಲಿ ನಿಂತರೂ ಹತ್ತು ಪೈಸೆಗೆ ಉಂಟಾ, ಸಮಕ್ಕೆ ಉಂಟಾ ಎಂದೆಲ್ಲಾ ಕೇಳಿ ಬೆಟ್ ಕಟ್ಟುವವರೇ ಜಾಸ್ತಿ. ಬೆಟ್ ವಿಷಯದಲ್ಲಿ ಮೂಗುಮಟ್ಟ ಕುಡಿದು ರಂಪಾಟ ಮಾಡುವ ದೃಶ್ಯ ಸಾಮಾನ್ಯವಾಗಿರುತ್ತದೆ. ಕೆಲವು ಕಡೆಗಳಲ್ಲಿ ಕಂಬಳದಲ್ಲಿ ಜುಗಾರಿ, ಶರಾಬು ವಿತರಣೆ ನಡೆಯುವುದು ನಮ್ಮ ಗಮನಕ್ಕೆ ಬಂದಿರಬಹುದು. ಅದೂ ಅಲ್ಲದೆ ಕಂಬಳದ ಗದ್ದೆಯಲ್ಲಿ ಯಜಮಾನಿಕೆಯ ದರ್ಪವನ್ನು ಗಮನಿಸಬಹುದು.


ಕಂಬಳ ಪ್ರತಿಷ್ಠೆಯ ಕಣ ಎಂದು ಎಲ್ಲರಿಗೂ ತಿಳಿದಿರುವಂಥದ್ದೇ. ತನ್ನ ಕೋಣಗಳು ಸೋತರೆ ಅವರಿಗೆ ಯಾವ ತೆರನಾದ ಸಿಟ್ಟಿರುತ್ತದೆ ಎಂದರೆ ಆ ಜಾಗದಲ್ಲಿ ಬೋ.. ಸೋ… ಎಂಬ ಮಾತುಗಳೂ ಕೇಳಿಬರುವುದು ಸಾಮಾನ್ಯ. ಕಂಬಳದ ಗದ್ದೆಯಲ್ಲಿ ಒಂದು ಫೋಟೋ ತೆಗೆಯುವಂತಿಲ್ಲ, ಏನಾದರೂ ಅನ್ನಲಿಕ್ಕಿಲ್ಲ. ತನ್ನ ಕೋಣಗಳು ಸೋತಿರುವ ಸಿಟ್ಟು ಹೀಗೆ ಉದ್ಗರ ತೆಗೆದ ಬಡಪಾಯಿ ಮೇಲೆ ಹೋಗುತ್ತದೆ.
ಕೆಲವು ವರ್ಷಗಳ ಹಿಂದೆ ಕಂಬಳದ ಕೋಣಗಳ ಬಗ್ಗೆ ಒಬ್ಬ ಏನೋ ಅಂದನೆಂದು ಆತನಿಗೆ ಬಾರುಕೋರಿನಲ್ಲಿ ಹೊಡೆದು ಕೊಂದ ಘಟನೆ ನಡೆದಿತ್ತು. ಇದೆಲ್ಲಾ ಯಾಕೆ ನಡೆದಿದೆ, ಕಂಬಳ ಗದ್ದೆಯಲ್ಲಿ ಜನರ ಮನಸ್ಥಿತಿ ಹೇಗೆ ಇರುತ್ತದೆ ಎಂಬುವುದಕ್ಕೆ ಒಂದು ಸಾಮಾನ್ಯ ಉದಾಹರಣೆ ಅಷ್ಟೆ.
ಕಂಬಳ ಮತ್ತೆ ಆರಂಭಿಸಲು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದು. ಕಂಬಳದ ಬಗ್ಗೆ ಸರಿಯಾದ ಮಾಹಿತಿಯನ್ನು ಕೋರ್ಟ್ಗೆ ನೀಡಿದರೆ ಕೋರ್ಟ್ ಕಂಬುಳಕ್ಕೆ ಮತ್ತೆ ಅವಕಾಶ ನೀಡುತ್ತದೆ. ಆದರೆ ಕಂಬುಳ ಮತ್ತೆ ಆರಂಭವಾಗುವ ಮುಂಚೆ ಸಂಪೂರ್ಭ ದೇಸೀ ಆಚರಣೆ ಶುದ್ಧವಾಗುವುದು ಅತಿ ಅಗತ್ಯವಾಗಿದೆ.
ಕಂಬಳದಲ್ಲಿ ಓಡುವ ಕೋಣಗಳ ಬೆನ್ನಿನ ಬಾರುಕೋಲಿನಿಂದ ಚರ್ಮ ಸುಲಿದು ರಕ್ತ ಒಸರುವಂತೆ ಹೊಡೆಯುವುದು ನಿಲ್ಲಬೇಕು. ಕಂಬಳದಲ್ಲಿ ಬೆಟ್ಟಿಂಗ್ ಜಾಲ ನಿಲ್ಲಬೇಕು. ಕಂಬಳ ಪ್ರತಿಷ್ಠೆಯ ಕಣವಾಗುವ ಬದಲು ತುಳು ಜನಪದ ಕ್ರೀಡೆ ಎಂಬ ನಿಟ್ಟಿನಲ್ಲಿ ನಡೆಯಬೇಕು. ಕಂಬಳಕ್ಕೆ ಕುಡಿದು ಚಿತ್ತಾಗಿ ಬಂದು ಅಮಾಯಕರ ಮೇಲೆ ಜಗಳ ಕಾಯುವುದು ನಿಲ್ಲಬೇಕು. ಕಂಬಳದಲ್ಲಿ ನಡೆಯುವ ಒಳ ರಾಜಕೀಯ ನಿಲ್ಲಬೇಕು.
ಕಂಬುಳ ನಿಷೇಧಕ್ಕಾಗಿ ಸಾವಿರಾರು ಮಂದಿ ಬೀದಿಗಿಳಿಯುತ್ತಿದ್ದಾರೆ. ಅದೇ ರೀತಿ ಕೋಣ, ಎತ್ತು. ಹಸುಗಳನ್ನು ಕೊಲ್ಲುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಗೋಹತ್ಯ ಪ್ರತಿಬಂಧಕಾ ಕಾಯ್ದೆ ಜಾರಿಗೊಳ್ಲಬೇಕು. ಯಾಕೆಂದರೆ ಗೋವನ್ನು ಕೊಲ್ಲುವುದಕ್ಕಿಂಲೂ ಕಂಬಳ ಗದ್ದೆಯಲ್ಲಿ ಓಡಿಸುವುದು ಅಷ್ಟು ದೊಡ್ಡ ಪಾತಕವಲ್ಲ.

