ಕಲ್ಲಡ್ಕ ಶ್ರೀ ರಾಮದಲ್ಲಿ ರಾಷ್ಟೀಯ ಏಕತಾ ದಿವಸ್ ಕಾರ್ಯಕ್ರಮ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಹಾ ವಿದ್ಯಾಲಯದಲ್ಲಿ ಪ್ರಭಾಸ ಮಾನವಿಕ ಸಂಘದ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದ ಪ್ರಯುಕ್ತ ಆಯೋಜಿಸಲಾದ “ರಾಷ್ಟೀಯ ಏಕತಾ ದಿವಸ್” ಕಾರ್ಯಕ್ರಮ ಮಂಗಳವಾರ ನಡೆಯಿತು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಕನ್ಯಾ ಮಾತಾಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಉಪನ್ಯಾಸಕಿ ರಶ್ಮಿತಾ ಅವರು ಉಪನ್ಯಾಸಗೈದು ಸದೃಢ ಭಾರತವನ್ನು ಕಟ್ಟುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮಾನವಿಕ ಸಂಘದ ನಿರ್ದೇಶಕ ಗಂಧರ್ವ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಬಿಂದು ಸ್ವಾಗತಿಸಿ, ದೀಕ್ಷಾ ವಂದಿಸಿದರು. ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.