ಬಂಟ್ವಾಳ: ಕುಲಾಲ ಸಮಾಜ ಸೇವಾ ಸಂಘ ವಗ್ಗ ಇದರ ಆಶ್ರಯದಲ್ಲಿ “ಕುಲಾಲ ಕ್ರೀಡೋತ್ಸವ ೨೦೨೩”ವು ವಗ್ಗ ಪ್ರೌಢ ಶಾಲಾ ಮೈದಾನದಲ್ಲಿ ರವಿವಾರ ನಡೆಯಿತು.

ಸಂಘದ ಹಿರಿಯ ಸದಸ್ಯ ನಾರಾಯಣ ಮೂಲ್ಯ ಇಜ್ಜಿದೊಟ್ಟು ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಪುರೂಷೋತ್ತಮ ಕುಲಾಲ್ ಹೇರೊಟ್ಟು ಅಧ್ಯಕ್ಷತೆ ವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ನಿವೃತ್ತ ಯೋಧ ವೆಂಕಪ್ಪ ಕುಲಾಲ್ ಬಂಗೇರಕೆರೆ, ನಿವೃತ್ತ ಶಿಕ್ಷಕ ಲೋಕಯ್ಯ ಮೂಲ್ಯ ಇಜ್ಜಿದೊಟ್ಟು, ನಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಮೂಲ್ಯ ಕಿನ್ನಿಯೂರು, ಮಾತೃ ಸಂಘದ ಪ್ರದಾನ ಕಾರ್ಯದರ್ಶಿ ಸದಾಶಿವ ಕುಲಾಲ್, ಜೊತೆ ಕಾರ್ಯದರ್ಶಿ ಪ್ರದೀಪ್ ಅತ್ತಾವರ, ಸೇವಾ ದಳಪತಿ ಕಿರಣ್ ಆಟ್ಲೂರು, ಕಾವಳ ಪಡೂರು ಗ್ರಾ. ಪಂಚಾಯತ್‌ನ ಮಾಜಿ ಅಧ್ಯಕ್ಷ ರಜನಿ ಬಾಬು, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸಾಂಸ್ಕೃತಿಕ ಸಂಚಾಲಕ ಪ್ರವೀಣ್ ಬಸ್ತಿ, ವಗ್ಗ ಕುಲಾಲ ಸಮಾಜ ಸೇವಾ ಸಂಘದ ಮಹಿಳಾ ಅಧ್ಯಕ್ಷೆ  ಶೋಭಾ ಅಲಂಪುರಿ ಉಪಸ್ಥಿತರಿದ್ದರು.

ಬಳಿಕ ವಿವಿಧ ಕ್ರೀಡಾಕೂಟ ಸ್ಪರ್ಧೆಗಳು ನಡೆಯಿತು. 

By Suddi9

Leave a Reply

Your email address will not be published. Required fields are marked *