ರೈತರಿಗೆ ಉದ್ಯೋಗ ಖಾತ್ರಿ ಮಾಹಿತಿ
ಬಂಟ್ವಾಳ: ಸಜಿಪ ಮುನ್ನೂರು ಗ್ರಾಮ ಪಂಚಾಯಿತ್ ವತಿಯಿಂದ ರೈತರಿಗೆ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ಶಿಬಿರವು ವಿದ್ಯಾನಗರ ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ನಲ್ಲಿ ಸೋಮವಾರ ನಡೆಯಿತು.

ಇಲಾಖೆಯ ಸಂವಹನ ಅಧಿಕಾರಿ ರಾಜೇಶ್ ಅವರು ವೈಯುಕ್ತಿಕ ಹಾಗೂ ಸಾರ್ವಜನಿಕವಾಗಿ ಯಾವೆಲ್ಲಾ ಕೆಲಸಗಳನ್ನು ಮಾಡಬಹುದೆಂಬ ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎo.ಸುಬ್ರಹ್ಮಣ್ಯ ಭಟ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮಿತಾ, ರೈತ ಸಂಘದ ಕಾರ್ಯದರ್ಶಿ ಎನ್ .ಕೆ .ಇದ್ದಿನಬ್ಬ, ಪಂಚಾಯಿತ್ ಸದಸ್ಯರಾದ ಸರೋಜಿನಿ, ಸಂದೀಪ್, ಮಾಜಿ ಪಂಚಾಯಿತಿ ಸದಸ್ಯೆ ದೇವಕಿ, ಪ್ರಮುಖರಾದ ರಾಜ, ದಿವಾಕರ, ನಿತ್ಯಾನಂದ ಮೊದಲಾದವರು ಉಪಸ್ಥಿತರಿದ್ದರು.