ಬಿ.ಸಿ.ರೋಡಿನಲ್ಲಿ ಆರ್ ಎಸ್ ಎಸ್ ಪಥಸಂಚಲನ
ಬಂಟ್ವಾಳ: ವಿಜಯದಶಮಿ ಪ್ರಯುಕ್ತ ಬಿ.ಸಿ.ರೋಡಿನಲ್ಲಿ ಭಾನುವಾರ ಬೆಳಿಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣ ವೇಷದಾರಿಗಳ ಆಕರ್ಷಕ ಪಥ ಸಂಚಲನ ನಡೆಯಿತು.
ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲಾ ಮೈದಾನದಿಂದ ಹೊರಟ ಪಥ ಸಂಚಲನ ರಾ.ಹೆ.ಯ ಬಿ.ಸಿ.ರೋಡಿನ ರಾಜಮಾರ್ಗದಲ್ಲಿ ಸಂಚರಿಸಿ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ತಿರುವು ಪಡೆದು ವಾಪಾಸ್ ಸರ್ವಿಸ್ ರಸ್ತೆಯ ಮೂಲಕ ಸಾಗಿ ಬಂದು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಪಕ್ಕದ ಮೈದಾನದಲ್ಲಿ ಸಂಪನ್ನಗೊಂಡಿತು.
ಆರ್ ಎಸ್ ಎಸ್ ಮುಖಂಡರಾದ ಡಾ.ಪ್ರಭಾಕರ ಭಟ್, ವಿನೋದ್ ಕೊಡ್ಮಾಣ್, ಅಜಯ್ ಕೊಂಬ್ರಬೈಲ್ ಬಂಟ್ವಾಳ, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ಚಾಳ ಸೇರಿದಂತೆ ನೂರಾರು ಮಂದಿ ಸ್ವಯಂ ಸೇವಕರು ಗಣ ವೇಷಧಾರಿಗಳಾಗಿ ಫಥ ಸಂಚಲನದಲ್ಲಿ ಭಾಗವಹಿಸಿದ್ದರು.
ಬಂಟ್ವಾಳ ನಗರ ಪೊಲೀಸರು ಬಂದೋಬಸ್ತ್ ನಡೆಸಿದ್ದರು.