ಬಂಟ್ವಾಳ ವಕೀಲರ ಸಂಘದಿಂದ ಭ್ರಷ್ಟಾಚಾರ ನಿರ್ಮೂಲನೆಯ ಕುರಿತ ಕಾನೂನು ಮಾಹಿತಿ ಕಾರ್ಯಾಗಾರ
ಬಂಟ್ವಾಳ: ಭ್ರಷ್ಟಾಚಾರ ನಿರ್ಮೂಲನೆಯ ಕುರಿತ ಕಾನೂನು ಮಾಹಿತಿ ಕಾರ್ಯಾಗಾರವು ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದಲ್ಲಿ ಸೋಮವಾರ ನಡೆಯಿತು.
ಬಂಟ್ವಾಳ ನ್ಯಾಯಾಲಯದ ಹಿರಿಯ ಸಿವಿಲ್ ನಾಯದೀಶ ಭಾಗ್ಯಮ್ಮ ಕಾರ್ಯಾಗಾರವನ್ನು ಉದ್ಘಾಟಿಸಿ ಪ್ರಮಾಣ ವಚನವನ್ನು ಬೋದಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ರಾಜೇಶ್ ಬೊಳ್ಳುಕಲ್ಲು ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿಗಳಾಗಿದ್ದ ಜೆ .ಯಂ .ಯಫ್. ಸಿ ನಾಯದೀಶರಾದ ಕೃಷ್ಣ ಮೂರ್ತಿ, ಲೋಕಾಯುಕ್ತ ಉಪನಿರೀಕ್ಷಕಿ ಕಲಾವತಿ.ಕೆ ಯವರು ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಕಾನೂನು ಮಾಹಿತಿ ನೀಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಯಂ ಅಶ್ವನಿ ಕುಮಾರ್ ರೈ, ಸುರೇಶ ಪೂಜಾರಿ, ಈಶ್ವರ್ ಉಪಾಧ್ಯಾಯ, ಹಿರಿಯ ವಕೀಲರಾದ ರಮೇಶ್ ಉಪಾಧ್ಯಾಯ, ವಿನೋದ್ ಕೆ, ಹೇಮಚಂದ್ರ, ವಕೀಲರ ಸಂಘದ ಖಜಾಂಜಿ ನಿರ್ಮಲ ಶೆಟ್ಟಿ, ಸರ್ಕಾರಿ ವಕೀಲರಾದ ಹರಿಣಿ ಕುಮಾರಿ, ಸರಸ್ವತಿ, ಸತೀಶ್ ಕೆ, ಯಶೋದಾ, ಅಭಿನಯ, ಸಂತೋಷ್ ಲೋಬೊ, ಮೋಹನ್ ಕಡೇಶಿವಾಲಯ, ಹಿರಿಯ, ಕಿರಿಯ ವಕೀಲರು ನ್ಯಾಯಾಲಯದ ಸಿಬಂದಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ವಕೀಲ ಅಬ್ದುಲ್ ಜಲೀಲ್ ಸ್ವಾಗತಿಸಿ, ನಿತಿನ್ ಕುಮಾರ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.