ಧರ್ಮ ಸಂರಕ್ಷಣಾ ಯಾತ್ರೆಗೆ ಬಿ.ಸಿ.ರೋಡಿನಲ್ಲಿ ಸ್ವಾಗತ
ಬಂಟ್ವಾಳ: ಭಾನುವಾರ ಸಂಜೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಿಂದ ಧರ್ಮಸ್ಥಳದವರೆಗೆ ನಡೆದ ಪಾದಯಾತ್ರೆ ಹಿನ್ನೆಲೆಯಲ್ಲಿ ಬಂಟ್ವಾಳಕ್ಕೆ ಆಗಮಿಸಿದ ಧರ್ಮ ಸಂರಕ್ಷಣಾ ಯಾತ್ರೆಗೆ ಬಿ.ಸಿ.ರೋಡ್ ಫ್ಲೈಓವರ್ ಬಳಿ ಅಭಿಮಾನಿಗಳು ಸ್ವಾಗತಿಸಿದರು.
ಮಂಗಳೂರಿನಿಂದ ಹೊರಟ ಯಾತ್ರೆ ಬಿ.ಸಿ.ರೋಡಿಗೆ ತಲುಪಿದಾಗ ಮಹಿಳೆಯರು ಆರತಿ ಬೆಳಗಿ ರಥವನ್ನು ಸ್ವಾಗತಿಸಿದರು. ಮಂಜುನಾಥ ಸ್ವಾಮಿಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭ ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಜಿ.ಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್, ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ ಪೂಂಜಾ ಫರಂಗಿಪೇಟೆ, ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ದ.ಕ. ನಿರ್ದೇಶಕ ಮಹಾಬಲ ಕುಲಾಲ್, ಬಂಟ್ವಾಳ ಯೋಜನಾಧಿಕಾರಿ ಮಾಧವ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜೈನ್ ಮಿಲನ್ ಪ್ರಮುಖರು, ಹಾಗೂ ನಾನಾ ಸಂಘ, ಸಂಸ್ಥೆಗಳ ಪ್ರಮುಖರಾದ ಶೇಖರ ಸಾಮಾನಿ, ಸದಾನಂದ ಗೌಡ, ದೀಪಕ್ ಕುಮಾರ್ ಜೈನ್, ಸುಭಾಶ್ಚಂದ್ರ ಜೈನ್, ಡಾ. ಸುದೀಪ್, ಹರ್ಷರಾಜ್ ಬಲ್ಲಾಳ, ಶಿವಶಂಕರ್ ಕೈಕುಂಜೆ, ಶಾಮಸುದರ್ಶನ ಭಟ್ ಹೊಸಮೂಲೆ ಸಹಿತ ಪ್ರಮುಖರು ಉಪಸ್ಥಿತರಿದ್ದು, ಯಾತ್ರೆಯನ್ನು ಸ್ವಾಗತಿಸಿದರು.