ಚಂದ್ರ ಗ್ರಹಣ ಪ್ರಯುಕ್ತ ವಿಶೇಷ ಪೂಜೆ
ಬಂಟ್ವಾಳ: ಸಜೀಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರ ಬಿಡುಗಡೆ,
ವಾಲ್ಮೀಕಿ ಜಯಂತಿ ಹಾಗೂ ಚಂದ್ರ ಗ್ರಹಣ ಪ್ರಯುಕ್ತ ಲೋಕ ಕಲ್ಯಾಣಾರ್ಥ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ದೇವರಿಗೆ ವಿಶೇಷ ಪೂಜೆ ಶನಿವಾರ ನಡೆಯಿತು.

ಸಜಿಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಎಂ ಭಟ್., ಕೆ ರಾಧಾಕೃಷ್ಣ ಆಳ್ವ., ನಿವೃತ್ತ ಸೇನಾ ಮುಖ್ಯಸ್ಥ ವಸಂತ ರಾವ್, ಪ್ರವೀಣ್ ಆಳ್ವ, ಸುಧಾಕರ ಕೇಟಿ, ಪ್ರವೀಣ್ ಭಂಡಾರಿ, ರಾಮಕೃಷ್ಣ ಭಟ್, ಪ್ರವೀಣ್ ಶೆಟ್ಟಿ, ಕಿಶನ್ ಸೇನವ, ಶುಭಾಷ್ ಮೊದಲಾದವರು ಉಪಸ್ಥಿತರಿದ್ದರು.