ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾ ಕೂಟ ಸಮಾರೋಪ: ವ್ಯಕ್ತಿತ್ವದ ವಿಕಸನಕ್ಕೆ ಕ್ರೀಡೆ ಮೂಲ ಸಾಧನ; ರೈ
ಬಂಟ್ವಾಳ: ಕ್ರೀಡೆ ಎನ್ನುವುದು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಾರಣವಾಗುತ್ತದೆ. ವ್ಯಕ್ತಿತ್ವದ ವಿಕಸನವಾಗಲು ಕ್ರೀಡೆ ಮೂಲ ಸಾಧನವಾಗಿದೆ. ಬಂಟ್ವಾಳ ತಾಲೂಕಿನಲ್ಲಿ ತಾಲೂಕು ಕ್ರೀಡಾಂಗಣಕ್ಕಾಗಿ ನಾನು ಶಾಸಕನಿದ್ದಾಗ ಸಾಕಷ್ಟು ಶ್ರಮಸಿದ್ದು, ಬೆಂಜನಪದವಿನಲ್ಲಿ ಖಾಸಗಿ ವ್ಯಕ್ತಿಗಳಿಂದ ಖರೀದಿ ಹಾಗೂ ಸರಕಾರಿ ಸ್ಥಳ ಸೇರಿ ಒಂಭತ್ತೂ ಕಾಲು ಎಕರೆ ಜಾಗವನ್ನು ತಾಲ್ಲೂಕು ಕ್ರೀಡಾಂಗಣಕ್ಕಾಗಿ ಗುರುತಿಸಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಮಂಗಳಾ ಸ್ಟೇಡಿಯಂನಲ್ಲಿ ಜರುಗಿದ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ೨೦೨೩-೨೪ ರ ಸಾಲಿನ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಾಧಕ ಶ್ರಮಿಕರನ್ನು ಸನ್ಮಾನಿಸಿ ಸಮಾರೋಪ ಭಾಷಣವನ್ನು ಮಾಡಿದರು.
ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ,ಬಂಟ್ವಾಳ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ನ ಅಧೀಕ್ಷಕ ಅಬ್ದುಲ್ ಕಬೀರ್, ತುಂಬೆ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿ ಅನಿಲ್ ಪಂಡಿತ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಮುಂದಿನ ಶೈಕ್ಷಣಿಕ ವರುಷದ ಕ್ರಿಡಾ ಕೂಟವನ್ನು ನಡೆಸಲು ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಬೊಂಡಾಲ ಇಲ್ಲಿನ ಚಿತ್ರಕಲಾ ಶಿಕ್ಷಕ ದೇವದಾಸ್ ಇವರಿಗೆ ತಾಲ್ಲೂಕು ದೈಹಿಕ ಶಿಕ್ಷಣ ಕ್ರೀಡಾಧಿಕಾರಿ ಕ್ರೀಡಾ ಧ್ವಜವನ್ನು ಹಸ್ತಾಂತರಿದರು.
ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ, ಶಿವಪ್ರಸಾದ್ ಶೆಟ್ಟಿ, ನವೀನ್ ಪಿ.ಎಸ್.,ಅಖಿಲ್ ಶೆಟ್ಟಿ, ರತ್ನಾವತಿ, ರಾಜೇಂದ್ರ ರೈ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆದಿಲ, ತುಂಬೆ ವಿದ್ಯಾ ಸಂಸ್ಥೆಯ ಪಿ.ಟಿ.ಎ. ಅಧ್ಯಕ್ಷ ನಿಸಾರ್ ಅಹಮದ್, ಗೋಪಾಲಕೃಷ್ಣ ತುಂಬೆ, ಮೋಹಿನಿ ಸುವರ್ಣ, ಅಬ್ದುಲ್ ಗಫೂರ್, ಕಲಾವಿದ ಸದಾಶಿವ ಡಿ.ತುಂಬೆ, ಪ್ರವೀಣ್ ಬಿ.ತುಂಬೆ, ಇಸಾಕ್, ಇಮ್ತಿಯಾಝ್, ಶರೀಫ್, ಇರ್ಫಾನ್ ,ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಸ್ವಾಗತಿಸಿ ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ನಿರೂಪಿಸಿದರು.