ಮೂಲ್ಕಿ: ಮೂಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡ್ ಎಂಬಲ್ಲಿನ ದಟ್ಟ ಕಾಡಿನ ಮಧ್ಯ ಮರದಲ್ಲಿ ಹಗ್ಗವನ್ನು ಮರಕ್ಕೆ ಬಿಗಿಯಾಗಿ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿಯೊಂದರ ಕೊಳೆತ ಶವ ಪತ್ತೆಯಾಗಿದ್ದು, ಭಾರೀ ಶಂಶಯಕ್ಕೆ ಕಾರಣವಾಗಿದೆ. ಆದರೆ ಈ ಜೋಡಿ ಎಲ್ಲಿಂದ ಬಂದಿದೆ, ಇದೆಲ್ಲಾ ಯಾರು, ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಶವದ ಗುರುತುಪತ್ತೆಯಾದ ನಂತರವಷ್ಟೇ ತಿಳಿದುಬರಬೇಕಾಗಿದೆ.
ಈ ಕಾಡು ದಟ್ಟಾವಾದ ಪ್ರದೇಶವಾಗಿರುವುದರಿಂದ ಈ ಪ್ರದೇಶಕ್ಕೆ ಯಾರೂ ಹೋಗುವುದಿಲ್ಲ, ಆದ್ದರಿಂದಲೇ ಈ ಸಾವು ನಿಗೂಢವಾಗಿಯೇ ಉಳಿಯುವಂತಾಗಿದ್ದು, ಬಹುಶಃ ಪ್ರೇಮಿಗಳಿರಬಹುದೆಂದು ಶಂಕಿಸಲಾಗಿದೆ.
ಮರಕ್ಕೆ ಕಟ್ಟಿರುವ ಹಗ್ಗವನ್ನು ಕಂಡಾಗ ಈ ಸಾವು ಬಹಳ ಶಂಶಯವನ್ನು ಉಂಟುಮಾಡುತ್ತಿದೆ. ಶವ ಸಂಪೂರ್ಣವಾಗಿ ಕೊಳೆತುಹೋಗಿರುವ ಕಾರಣ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪ್ರೇಮಿಗಳು ಬೇಸೆತ್ತು ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ: ಸ್ಥಳೀಯರು ಕಟ್ಟಿಗೆ ತರಲೆಂದು ಕಾಡಿಗೆ ಹೋದಾಗ ಈ ಎರಡು ಕೊಳೆತ ಶವಗಳು ಪತ್ತೆಯಾಗಿದೆ. ಮೂಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.



