ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರಿನಲ್ಲಿ ಅಂಧರ ಗೀತ ಗಾಯನ ಕಾರ್ಯಕ್ರಮ
ಕೈಕಂಬ: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರು ಅ.೨೧ ಶನಿವಾರದಂದು ನವರಾತ್ರಿ ಉತ್ಸವ, ಶಾರದಾ ಮಹೋತ್ಸವದ ಸುಸಂದರ್ಭದಲ್ಲಿ ದೀನಬಂಧು ಸಮಾಜ ಸೇವಾ ಸಂಘ, ಬಡಗಬೆಳ್ಳೂರು – ಪೊಳಲಿ ಇದರ ೭ನೇ ವರ್ಷಾಚರಣೆ ಪ್ರಯುಕ್ತ ಸಹಾಯದ ನಿರೀಕ್ಷೆಯಲ್ಲಿರುವ ಅಂಧರ ಬಾಳಿಗೆ ಸಣ್ಣ ಸಹಾಯ ನೀಡುವ ಸಲುವಾಗಿ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ ಶೃಂಗೇರಿ ಇವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಗೀತ ರಸ ಮಂಜರಿ ಕಾರ್ಯಕ್ರಮಕ್ಕೆ ಆಗಮಿಸಿ ಪಾಲ್ಗೊಂಡ ಕಲಾವಿದರಿಗೆ ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಜನರು ಕಾರ್ಯಕ್ರಮವನ್ನು ಪ್ರೋತ್ಸಾಹಿಸಿ ಅಂಧರ ಸಹಾಯ ನಿಧಿಗೆ ಅವರಿಂದಾದಷ್ಟು ಧನ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ದೀನಬಂಧು ಸಮಾಜ ಸೇವಾ ಸಂಘ ಬಡಗಬೆಳ್ಳೂರು – ಪೊಳಲಿ ಇದರ ಸಂಸ್ಥಾಪಕ ಜನಾರ್ದನ್ ಹೆಚ್.ಎಸ್, ಕಾರ್ಯನಿರ್ವಾಹಕ ವಸಂತ್ ಎಮ್., ಕಾರ್ಯದರ್ಶಿ ದಿನೇಶ್ ವರಕೋಡಿ, ಸದಸ್ಯರಾದ ದಿನೇಶ್ ದೇವರಗುಡ್ಡೆ, ಗ್ರಾಂ.ಪಂ. ಅಧ್ಯಕ್ಷೆ ರೂಪ ನಾಯ್ಕ್, ಸುರೇಶ್ ಕೋಟ್ಯಾನ್, ಲತಾ ಬೆಳ್ಳೂರು, ಭಾಸ್ಕರ ಈಶನಗರ, ಮಮತಾ, ಚೈತ್ರ, ಪ್ರಸನ್ನ ಬೆಳ್ಳೂರು, ಗೋಪಾಲ ಬೆಳ್ಳೂರು, ಶಶಿಕಿರಣ್ ಬೆಳ್ಳೂರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಬಳಿಕ ಊರಿನ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.