ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕಿನ ಬಿ.ಸಿ.ರೋಡ್ ಶಾಖೆಯ ಸ್ಥಳಾಂತರ ಸಮಾರಂಭ
ಕೈಕಂಬ: ಶ್ರೀ ಗೋಕರ್ಣನಾಥ ಕೋ ಆಪೊರೇಟಿವ್ ಬ್ಯಾಂಕಿನ ಬಿ.ಸಿ.ರೋಡ್ ಶಾಖೆಯನ್ನು ಪ್ರಸ್ತುತ ಇರುವ ಜಾಕು ಹೌಸ್ ಕಟ್ಟಡದ ನೆಲ ಅಂತಸ್ತಿನಿಂದ ಭೂ ಅಭಿವೃದ್ಧಿ ಬ್ಯಾಂಕ್ ಕಟ್ಟಡದ ನೆಲ ಅಂತಸ್ತಿಗೆ ಸ್ಥಳಾಂತರಿಸುವ ಸಮಾರಂಭ ಕಾರ್ಯಕ್ರಮವು ಅ.೨೨ ಭಾನುವಾರದಂದು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ನೆರವೇರಿಸಲಿದ್ದಾರೆ. ಭದ್ರತಾ ಕೊಠಡಿ ಉದ್ಘಾಟನೆಯನ್ನು ಮಾಜಿ ಸಚಿವ ರಮಾನಾಥ ರೈ ಹಾಗೂ ಗಣಕ ಯಂತ್ರದ ಚಾಲನೆಯನ್ನು ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನೆರವೇರಿಸಲಿದ್ದಾರೆ. ನಗದು ಕೌಂಟರ್ ಉದ್ಘಾಟನೆಯನ್ನು ಶುಭ ಬೀಡಿಗಳು ಹಾಗೂ ಶುಭಲಕ್ಷ್ಮೀ ಟ್ರಾವೆಲ್ಸ್ ಮಾಲಕ ಭುವನೇಶ್ ಪಚ್ಚಿನಡ್ಕ ನೆರವೇರಿಸಲಿರುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಎಂ.ರಾಮಚಂದ್ರ ವಹಿಸಲಿದ್ದಾರೆ. ದ.ಕ.ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ ಬಿ.ರಮೇಶ್, ಭೂ ಅಭಿವೃದ್ಧಿ ಬ್ಯಾಂಕ್ ಕಟ್ಟಡ ಬಿ.ಸಿ.ರೋಡ್ ನ ಅಧ್ಯಕ್ಷ ಅರುಣ್ ರೋಶನ್ ಡಿ’ಸೋಜಾ, ಬಂಟ್ವಾಳ ಡಿವೈಎಸ್‌ಪಿ. ಪ್ರತಾಪ್ ಸಿಂಗ್ ಥೋರಟ್, ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷ ಹರೀಶ್ ಉದನೆ, ಉದ್ಯಮಿ ಅಬ್ದುಲ್ ಮಜೀದ್ ಬಿ.ಸಿ.ರೋಡ್ ಮುಖ್ಯ ಅಥಿತಿಗಳಾಗಿ ಆಗಮಿಸಲಿರುವರು.