ಯಕ್ಷಕಲಾ ಪೊಳಲಿ 28ನೇ ವರ್ಧಂತ್ಯುತ್ಸವ; ಪೊಳಲಿ ಯಕ್ಷೋತ್ಸವ – 2023
ಕೈಕಂಬ: ಯಕ್ಷಕಲಾ ಪೊಳಲಿ ಇದರ ೨೮ನೇ ವರ್ಧಂತ್ಯುತ್ಸವದ ಅಂಗವಾಗಿ ಪೊಳಲಿ ಯಕ್ಷೋತ್ಸವ-೨೦೨೩ ಎಂಬ ಕಾರ್ಯಕ್ರಮವು ಅ.೧೪ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಮೇಳದ ಸಂಚಾಲಕ ಶ್ರೀ ಪಳ್ಳಿ ಕಿಶನ್ ಹೆಗ್ಡೆಯವರು ವಹಿಸಿದ್ದರು.
ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯರು ಆಶೀರ್ವಚನ ನೀಡಿದರು.ಮುಖ್ಯ ಅಥಿತಿಯಾಗಿ ನಮ್ಮ ಕುಡ್ಲ ಚಾನೆಲ್ ನ ನಿರ್ದೇಶಕ ಲೀಲಾಕ್ಷ ಕರ್ಕೇರ,ಉದ್ಯಮಿ ಭುವನೇಶ್ ಪಚ್ಚಿನಡ್ಕ,ಸದಾನಂದ ಶೆಟ್ಟಿ ರಂಗೋಲಿ,ಸುಕೇಶ್ ಚೌಟ ಬಡಕಬೈಲು ಆಗಮಿಸಿದ್ದರು.
ಈ ಸಂದರ್ಭದಲ್ಲಿ ತುಳು,ಕನ್ನಡ ಸಾಹಿತಿ,ಪ್ರಸಂಗ ಕರ್ತ,ನಾಟಕ,ಯಕ್ಷಗಾನ ಕಲಾವಿದ,ಅರ್ಥದಾರಿ,ನಿರೂಪಕ ಕದ್ರಿ ನವನೀತ ಶೆಟ್ಟಿಯವರಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ-೨೦೨೩ನ್ನು ನೀಡಿ ಗೌರವಿಸಲಾಯಿತು.

ಯಕ್ಷದೇವ ಮಿತ್ರ ಕಲಾ ಮಂಡಳಿ(ರಿ) ಬೆಳುವಾಯಿ ಸಂಸ್ಥೆಯ ಮುಖ್ಯಸ್ಥ ದೇವಾನಂದ ಭಟ್ ಹಾಗೂ ಸುವರ್ಣ ಪ್ರತಿಷ್ಠಾನ ಕರ್ನಿಕೆ ಸಂಸ್ಥೆಯ ಸದಾನಂದ ಸುವರ್ಣ ಅವರನ್ನು ಗೌರವಿಸಲಾಯಿತು.

ಹಿರಿಯ ಪ್ರಸಿದ್ಧ ಕಲಾವಿದರಾದ ಡಿ.ಮನೋಹರ ಕುಮಾರ್,ಸೀತಾರಾಮ ಕುಮಾರ್ ಕಟೀಲು,ವಿಷ್ಣು ಶರ್ಮ ವಾಟೆಪಡ್ಪು,ಗುಂಡಿಮಜಲು ಗೋಪಾಲ ಕೃಷ್ಣ ಭಟ್,ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್,ಸಬ್ಬರಕೋಡಿ ರಾಮ್ ಭಟ್,ಮೂರ್ಜೆ ವೆಂಕಟೇಶ್ ಶೆಟ್ಟಿ,ಎಂ.ಎ.ಚoಬಲ್ತಿಮಾರ್,ಡಾ.ವಾದಿರಾಜ ಕಲ್ಲೂರಾಯ ಇವರನ್ನು ಸನ್ಮಾನಿಸಲಾಯಿತು.

ಯಕ್ಷಗಾನ ವಿದ್ವಾಂಸ ಉಜಿರೆ ಅಶೋಕ್ ಭಟ್ ಅಭಿನಂದನಾ ಭಾಷಣ ಮಾಡಿದರು.ಸಂಸ್ಥಾಪಕ ಅ.ನ.ಭ. ಪೊಳಲಿ ಲೋಕೇಶ್ ಭರಣಿ,ಮೋಹನ್ ಬಿಲ್ವಪತ್ರೆ,ಯಶವಂತ್ ಪೊಳಲಿ,ಸುಬ್ರಾಯ ಕಾರಂತ್ ಪೊಳಲಿ,ಯಶೋದರ ಪೊಳಲಿ, ಸಂದೀಪ್ ಪಡ್ಪು,ಸಂದೀಪ್ ಅಖಿಲೇಶ್ವರ,ನವೀನ್ ಕಟ್ಟಪುಣಿ ಮೊದಲಾದವರು ಉಪಸ್ಥಿತರಿದ್ದರು.


ಸಂಚಾಲಕ ವೆಂಕಟೇಶ್ ನಾವಡ ಸ್ವಾಗತಿಸಿ,ಸಂಘಟಕ ಬಿ.ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಳಿನಾಕ್ಷ ನಂದನೆ ಹಾಗೂ ಅಂಬಾಶಪಥ ಎನ್ನುವ ಯಕ್ಷಗಾನ ಬಯಲಾಟ ತುಂಬಿದ ಜನಸಂದಣಿಯಲ್ಲಿ ಜರುಗಿತು.