ರಾಮಕೃಷ್ಣ ತಪೋವನದಲ್ಲಿ ಜಗನ್ಮಾತೆಯ ವಿಶೇಷ ಆರಾಧನೆ ನವದುರ್ಗಾ ಪೂಜೆ
ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಅ.೨೪ ಮಂಗಳವಾರ ವಿಜಯ ದಶಮಿಯಂದು ಜಗನ್ಮಾತೆಯ ವಿಶೇಷ ಆರಾಧನೆಯನ್ನು ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಕುಮಾರಿ ಪೂಜೆ, ದುರ್ಗಾ ಹೋಮ, ಭಜನೆ ಹಾಗೂ ನವದುರ್ಗೆಯರಿಗೆ ಪೂಜೆ ಸಲ್ಲಿಸುವ ಮೂಲಕ ಜಗನ್ಮಾತೆಯ ಆರಾಧನೆ ನೆರವೇರಿಸಿದರು.
ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಸ್ವಾಮೀಜಿ ನವರಾತ್ರಿಯ ಪ್ರತಿದಿನ ಕುಮಾರಿ ಪೂಜೆ ಕೈಗೊಂಡು, ಅ.೨೪ ನವರಾತ್ರಿಯ ಕೊನೆಯ ದಿನ ವಿಜಯ ದಶಮಿಯ ಪರ್ವ ಕಾಲದಲ್ಲಿ ೯ ಕುಮಾರಿಯರಿಗೆ ನವದುರ್ಗೆಯರ ಅಲಂಕಾರ ಮಾಡಿ ನವದುರ್ಗೆಯರಿಗೆ ಆರತಿ ಮಾಡಿ ಕುಮಾರಿ ಪೂಜೆಯನ್ನು ಸಂಪನ್ನಗೊಳಿಸಿದರು.