ಹಿರಿಯ ನ್ಯಾಯವಾದಿ ತಾರನಾಥ ಪೂಜಾರಿಗೆ ಸನ್ಮಾನ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ
ಕೈಕಂಬ: ಹೈಕೋರ್ಟ್ ನ ಹಿರಿಯ ನಿರ್ದೇಶಿತ ನ್ಯಾಯವಾದಿ ತಾರನಾಥ ಪೂಜಾರಿಯವರಿಗೆ ಇರುವೈಲು ಶ್ರೀ ದುರ್ಗಾಪರಮೇಶ್ವರೀ ಕುಣಿತ ಭಜನಾ ಮಂಡಳಿಯಿಂದ ಸನ್ಮಾನ ಹಾಗೂ ಮಂಡಳಿಯ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾರನಾಥ ಪೂಜಾರಿ,ಭಜನಾ ಮಂಡಳಿಯ ಸದಸ್ಯರಿಗೆ ಸಮವಸ್ತ್ರ ವಿತರಿಸಿದ ಬಳಿಕ ಭಜನೆಯ ಕುರಿತು ಮಾತನಾಡುತ್ತಾ ಭಜನೆಯಿಂದ ಮನಸ್ಸಿನ ಸಮತೋಲನ ಕಾಪಾಡಿಕೊಂಡು ಬರಲು ಸಾಧ್ಯ,ಇದರಿಂದ ಶಿಸ್ತು,ಸಂಯಮ,ಶ್ರದ್ಧೆ ಬೆಳೆಯುತ್ತದೆ.ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು,ಅಲ್ಲದೇ ಜೀವನದಲ್ಲಿ ಏನೇ ಕಷ್ಟ ಬಂದರು ಅದನ್ನು ಮೆಟ್ಟಿ ನಿಂತು ಸಾಧಿಸಿ ತೋರಿಸಲು ಹಿಂಜರಿಯಬಾರದು,ಏನಾದರೂ ಸಾಧನೆ ಮಾಡಬೇಕೆಂಬ ಮನಸ್ಸಿದ್ದರೆ ರಿಸ್ಕ್ ತೆಗೆದುಕೊಂಡರೆ ಮಾತ್ರ ಸಾಧಿಸಲು ಸಾಧ್ಯ ಎಂದರು.
ಇರುವೈಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಐ.ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಜನೆಯ ಮಹತ್ವದ ಬಗ್ಗೆ ವಿವರಿಸುತ್ತಾ ಮನಸ್ಸಿಗೆ ನೆಮ್ಮದಿಯ ಜೊತೆಗೆ ದೇವರನ್ನು ಒಲಿಸಿಕೊಳ್ಳುವ ಸರಳ ಮತ್ತು ಸುಲಭದ ದಾರಿ ಎಂದರೆ ಭಜನಾ ಸಂಕೀರ್ತನೆ ಎಂದರು.
ಭಜನಾ ಮಂಡಳಿಯ ವತಿಯಿಂದ ತಾರನಾಥ ಪೂಜಾರಿಯವರನ್ನು ಗೌರವಿಸಿ,ಸನ್ಮಾನಿಸಲಾಯಿತು.ಇದೇ ವೇಳೆ ಅತ್ಯಧಿಕ ಅಂಕ ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿನಿಯರಾದ ನಂದಿನಿ ಮತ್ತು ಪೂಜಾ ಅವರನ್ನು ಸನ್ಮಾನಿಸಲಾಯಿತು.
ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಇರುವೈಲು ಇದರ ಅಧ್ಯಕ್ಷ ಬಾಲಚಂದ್ರ ಶೆಟ್ಟಿ,ಹಿರಿಯ ಭಜಕ ಹರಿಪ್ರಸಾದ್ ಶೆಟ್ಟಿ ಕೊಲ್ಲಾಯಿಕೋಡಿ,ಉದ್ಯಮಿಗಳಾದ ಸತೀಶ್ ಚಂದ್ರ ಪಾಣಿಲ,ಶಾಂತಲಾ ಎಸ್. ಆಚಾರ್ಯ ಮೂಡುಬಿದಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂದಿನಿ ಸ್ವಾಗತಿಸಿ,ಹರ್ಷಿತಾ ಪ್ರಾರ್ಥಿಸಿದರು.ಗುರುಪ್ರಸಾದ್,ಭರತ್,ಅಶ್ವಥ್ ಸನ್ಮಾನ ಪತ್ರ ವಾಚಿಸಿದರು.ನಿಶಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.