ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಪದಪ್ರದಾನ ಸಮಾರಂಭ
ಕೈಕಂಬ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮೂಡುಬಿದಿರೆ ವಲಯದ 2023-25ನೇ ಸಾಲಿನ ಪದಪ್ರದಾನ ಸಮಾರಂಭ ಮತ್ತು ಕುಟುಂಬ ಸಮ್ಮಿಲನವು ಅ.೧೪ ಶನಿವಾರದಂದು ಸಂಜೀವ ಶೆಟ್ಟಿ ಮಲ್ಟಿಪರ್ಪಸ್ ಹಾಲ್ ಒಂಟಿಕಟ್ಟೆ,ಮೂಡುಬಿದಿರೆಯಲ್ಲಿ ನಡೆಯಿತು.

೨೦೨೩-೨೫ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷ ಸುಂದರ್ ಸಾಲ್ಯಾನ್,ಅಧ್ಯಕ್ಷ ರಾಜೇಶ್ ಎಸ್.ಅಮೀನ್,ಉಪಾಧ್ಯಕ್ಷ ಮನೋಜ್ ಕುಮಾರ್,ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೆ.ಕಾಶಿಪಟ್ಣ,ಕೋಶಾಧಿಕಾರಿ ರಂಜಿತ್ ಕೋಟ್ಯನ್,ಜೊತೆ ಕಾರ್ಯದರ್ಶಿ ಸತೀಶ್ ಎಂ.,ಛಾಯಾ ಕಾರ್ಯದರ್ಶಿ ಕಿಶೋರ್ ಪೆರಿಂಜೆ,ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ರಾವ್,ಸಂಘಟನಾ ಕಾರ್ಯದರ್ಶಿ ಭಾಸ್ಕರ್ ಕೋಟ್ಯಾನ್,ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಗಂಜಿಮಠ ಹಾಗೂ ಸೌಜನ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್.ಕೆ.ಪಿ.ಎ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ಎಸ್.ಕೆಪಿ.ಎ ಸಲಹಾ ಸಮಿತಿ ದ.ಕ ಮತ್ತು ಉಡುಪಿ ಜಿಲ್ಲೆ ಸಂಚಾಲಕ ಕರುಣಾಕರ್ ಕಾನಂಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್.ಕೆ.ಪಿ.ಎ. ದ.ಕ ಮತ್ತು ಉಡುಪಿ ಜಿಲ್ಲೆ,ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್. ಬಂಟ್ವಾಳ,ಪ್ರಶಾಂತ್ ಕುಮಾರ್ ಪೈ ವಲಯ ಅರಣ್ಯಾಧಿಕಾರಿ ಬೆಂಗಳೂರು,ಎಸ್.ಕೆ.ಪಿ.ಎ. ದ.ಕ ಮತ್ತು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ,ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ವಾಸುದೇವ ರಾವ್,ಎಸ್.ಕೆ.ಪಿ.ಎ. ದ.ಕ ಮತ್ತು ಉಡುಪಿ ಜಿಲ್ಲಾ ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್,ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕ ರಾಮ ಕೋಟ್ಯಾನ್,ಎಸ್.ಕೆ.ಪಿ.ಎ. ದ.ಕ ಮತ್ತು ಉಡುಪಿ ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ವಿಲ್ಫ್ರೆಡ್ ಮೆಂಡೋನ್ಸಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.