Published On: Wed, Oct 11th, 2023

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ದ.ಕ.ಜಿ.ಪಂ. ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ ಇದರ ಸಂಯುಕ್ತ ಆಶ್ರಯದಲ್ಲಿ  ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು.

೨೦೦ಮೀ. ಮತ್ತು ೧೦೦ಮೀ. ಓಟ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ೭ನೇ ತರಗತಿಯ ಶ್ರೇಯಾಂಕ್ ಶೆಟ್ಟಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

೬೦೦ಮೀ ಮತ್ತು ೪೦೦ ಮೀ ಓಟದ ಸ್ಪರ್ಧೆಯಲ್ಲಿ ೭ನೇ ತರಗತಿಯ ಚಿಂತನ್ ಪ್ರಥಮ ಸ್ಥಾನ,ಅಡೆತಡೆ ಓಟದಲ್ಲಿ ೭ನೇ ತರಗತಿಯ ಗುರುನಂದನ್ ರೈ ಪ್ರಥಮ ಸ್ಥಾನ,ಎತ್ತರ ಜಿಗಿತದಲ್ಲಿ ೭ನೇ ತರಗತಿಯ ರಮ್ಯ ಪ್ರಥಮ ಸ್ಥಾನ,೭ನೇ ತರಗತಿಯ ಸಾನ್ವಿ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಉದ್ದ ಜಿಗಿತದಲ್ಲಿ  ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಚಕ್ರ ಎಸೆತದಲ್ಲಿ ೭ನೇ ತರಗತಿಯ ಭವಿಷ್ ಅರಸ್ ದ್ವಿತೀಯ ಸ್ಥಾನ ಹಾಗೂ ಸಂಕೀರ್ತ್ ಶೆಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ.೪೦೦ಮೀ ಓಟದಲ್ಲಿ ೭ನೇ ತರಗತಿಯ ಜನನಿ ತೃತೀಯ ಸ್ಥಾನ, ೨೦೦ ಮೀ ಓಟದಲ್ಲಿ ೭ನೇ ತರಗತಿಯ ಶ್ರೇಯಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 

ಹಾಗೂ ಬಾಲಕರ ರಿಲೇ ತಂಡವು ದ್ವಿತೀಯ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದೆ.ಒಟ್ಟು ೮ ಪ್ರಥಮ ಸ್ಥಾನ,೩ ದ್ವಿತೀಯ ಮತ್ತು ೩ ತೃತೀಯ ಬಹುಮಾನದೊಂದಿಗೆ ವೈಯಕ್ತಿಕ ಚಾಂಪಿಯನ್ ಹಾಗೂ ಸಮಗ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ಇವರಿಗೆ ಶ್ರೀರಾಮ ವಿದ್ಯಾಸಂಸ್ಥೆಯ ಅಧ್ಯಕ್ಷರು,ಸಂಚಾಲಕರು,ಆಡಳಿತ ಮಂಡಳಿಯ ಸದಸ್ಯರು,ಮುಖ್ಯೋಪಾಧ್ಯಾಯರು ಹಾಗೂ ಬೋಧಕ-ಬೋಧಕೇತರರು ಅಭಿನಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter