ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಜಾರಿಗೆ ಆಗ್ರಹ
ಬಂಟ್ವಾಳ: ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ೨೦೨೧-೨೨ ಹಾಗೂ ೨೦೨೨-೨೦೨೩ರ ವಿದ್ಯಾರ್ಥಿವೇತನ ಜಾರಿ ಹಾಗೂ ೨೦೨೩-೨೪ ನೇ ಸಾಲಿನ ವೇತನಕ್ಕೆ ಕೂಡಲೇ ಅರ್ಜಿ ಆಹ್ವಾನಿಸಬೇಕು,ಪಿಂಚಣಿ ಅರ್ಜಿ ಸಲ್ಲಿಸಲು ಇರುವ ಕಾಲಮಿತಿ ರದ್ದುಗೊಳಿಸಿ,ತಿರಸ್ಕರಿಸಿರುವ ಅರ್ಜಿಗಳಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಬಂಟ್ವಾಳ ವೃತ್ತ ಕಾರ್ಮಿಕ ನಿರೀಕ್ಷಕರ ಮೂಲಕ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯದರ್ಶಿ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ರಾಮಣ್ಣ ವಿಟ್ಲ,ಉಪಧ್ಯಾಕ್ಷ ಅಚ್ಚುತ ಕಟ್ಟೆ,ಕೋಶಧಿಕಾರಿ ದಿನೇಶ್ ಆಚಾರ್,ಮುಖಂಡರುಗಳಾದ ಅಣ್ಣಿ ಪೂಜಾರಿ ಕಲ್ಲಡ್ಕ, ಬೆನೇಡಿಟ್ಟ್ ಡಿ ಸೋಜ ಕುಡ್ತಮುಗೇರು,ದಿವಾಕರ ಮೂಲ್ಯ ನೆಟ್ಲ ಕಲ್ಲಡ್ಕ,ಆನಂದ ಶೆಟ್ಟಿಗಾರ ಸಾಲೆತ್ತೂರು,ರಾಮಣ್ಣ ಸಪಲ್ಯ ಇರಂದೂರು,ರಾಮಣ್ಣ ಗೌಡ ಕುಂಡಡ್ಕ ಮೊದಲಾದವರಿದ್ದರು.