ಬಂಟ್ವಾಳ: ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಅವರಿಗೆ ಕಲಾ ರಂಗದ ಮುಕುಟಮಣಿ ದಿವಂಗತ ಶಾಂತಾರಂ ಕಲ್ಲಡ್ಕ ಅವರ ಹೆಸರಿನಲ್ಲಿ ನೀಡುವ ಪ್ರತಿಷ್ಟಿತ “ಶಾಂತಶ್ರೀ” ಪ್ರಶಸ್ತಿಗೆ  ದೈವನರ್ತಕ ರುಕ್ಮಯ ನಲಿಕೆ ಅವರು ಆಯ್ಕೆಯಾಗಿದ್ದಾರೆ.

ಅದೇ ರೀತಿ ನವರಾತ್ರಿ ಉತ್ಸವದ ಸಮಯ ಗ್ರಾಮದ ಸಾಧಕರನ್ನು ಗುರುತಿಸಿ ಅವರಿಗೆ ಗ್ರಾಮ ಗೌರವ ನೀಡಲಾಗತ್ತಿದ್ದು,ಈ ಬಾರಿಯ ಗ್ರಾಮ ಗೌರವ ಪುರಸ್ಕಾರಕ್ಕೆ 31 ಬಾರಿ ರಕ್ತದಾನಗೈದಿರುವ ಕುಶಲ ಚೆಂಡೆ ಇವರನ್ನು ಆಯ್ಕೆ ಮಾಡಲಾಗಿದೆ.

ಶ್ರೀ ಶಾರದ ಸೇವಾ ಪ್ರತಿಷ್ಠಾನ ಕಲ್ಲಡ್ಕ ಇದರ ಆಶ್ರಯದಲ್ಲಿ ಜರುಗುವ 46ನೇ ವರ್ಷದ ಶ್ರಿ ಶಾರದ ಪೂಜಾ ಮಹೋತ್ಸವದ ಮೂರನೇ ದಿನ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಭ್ಯಾಗತರ ಸಮಕ್ಷಮದಲ್ಲಿ ಈ ಪ್ರಶಸ್ತಿ ಮತ್ತು ಗ್ರಾಮ ಗೌರವವನ್ನು ಪ್ರಧಾನ ಮಾಡಲಾಗುವುದೆಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *