ಸೇವಾ ಮನೋಭಾವ ಬೆಳೆಸೋಣ,ಮಾನವೀಯ ಮೌಲ್ಯಗಳ ಮೂಲಕ ಉತ್ತಮ ನಾಗರೀಕರಾಗೋಣ: ರೋಶಲ್ ಬಿ.ಎಸ್
ಕೈಕಂಬ: ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆ ಕಿನ್ನಿಕಂಬಳ ಇಲ್ಲಿನ ವಿದ್ಯಾರ್ಥಿ ಶಿಕ್ಷಕಿಯರ ೨೦೨೩-೨೪ರ ಪೌರತ್ವ ತರಬೇತಿ ಶಿಬಿರ ಸ್ನೇಹ ಸದನ,ಕಿನ್ನಿಕಂಬಳದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಯಟ್ ನ ಪ್ರಾಂಶುಪಾಲೆ ರಾಜಲಕ್ಷ್ಮಿ ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಜನರ ಜನ ಜೀವನ ತಿಳಿಯಲು ಮತ್ತು ಉತ್ತಮ ನಾಗರೀಕ ಮೌಲ್ಯಗಳ ವರ್ಧನೆಗೆ ಈ ಶಿಬಿರವು ನಾಂದಿ ಹಾಡಲಿ ಎಂದು ಶುಭಹಾರೈಸಿದರು.
ಬೆಥನಿ ವಿದ್ಯಾಸಂಸ್ಥೆ ಮಂಗಳೂರು ಪ್ರಾಂತ್ಯದ ಸಹಾಯಕ ಪ್ರಾಂತ್ಯಾಧಿಕಾರಿ ರೋಶಲ್ ಬಿ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸೇವಾ ಮನೋಭಾವದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿ,ಉತ್ತಮ ನಾಗರೀಕರಾಗಲು ಶಿಬಿರವು ಸಹಾಯವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸ್ನೇಹ ಸದನದ ಆಡಳಿತಾಧಿಕಾರಿ ಧರ್ಮಗುರು ಜೋಮಿನ್ ಮಾತನಾಡಿ”ಉತ್ತಮ ಪೌರರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು”ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಲವೀನಾ ಲೋಬೋ,ಕಾರ್ಯಕ್ರಮದ ಸಂಯೋಜನಾಧಿಕಾರಿ ಜಾಸ್ಮಿನ್ ಮೊರಸ್ ಉಪಸ್ಥಿತರಿದ್ದರು.
ಸೌಂದರ್ಯ ಕಾರ್ಯಕ್ರಮವನ್ನು ನಿರೂಪಿಸಿ,ಜಾಸ್ಮಿನ್ ಮೊರಸ್ ಸ್ವಾಗತಿಸಿದರು.ವೀಣಾ ಬೆನ್ನಿಸ್ ವಂದಿಸಿದರು.