ಶ್ರೀರಾಧಾ ಸುರಭಿ ಗೋ ಮಂದಿರದಲ್ಲಿ “ಗೋ- ಮಾತೃ ಸಂಗಮ”
ಬಂಟ್ವಾಳ: ಪುದು ಗ್ರಾಮದ ಬ್ರಹ್ಮಗಿರಿ ಗೋವಿನ ಶ್ರೀರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನದಲ್ಲಿ ನಡೆಯಲಿರುವ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ,ಮಹಾಯಜ್ಞ ಹಾಗೂ ಗೋ ನವರಾತ್ರಿ ಉತ್ಸವದ ಪೂರ್ವಭಾವಿಯಾಗಿ “ಗೋ- ಮಾತೃ” ಸಂಗಮವು” ಭಾನುವಾರ ಗೋವಿನ ತೋಟ ರಾಧಾ ಸುರಭಿ ಗೋ ಮಂದಿರದ ವಠಾರದಲ್ಲಿ ನಡೆಯಿತು.
ಕೊಡ್ಮಾಣ್ ವಿವೇಕ್ ಆಳ್ವ ಅವರು “ಗೋ- ಮಾತೃ” ಸಂಗಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಅತಿಥಿಯಾಗಿದ್ದ ರಾಧಾ ಸುರಭಿ ಗೋಮಂದಿರದ ಅಧ್ಯಕ್ಷ ಭಕ್ತಿಭೂಷಣ್ ದಾಸ್ ಪ್ರಭುಜಿಯವರು ಮಾತನಾಡಿ,ಗೋ ಮತ್ತು ಮಾತೆ ಎರಡೂ ಕೂಡ ಈ ಭೂಮಿ ಮೇಲಿನ ಮಹಾನ್ ಶಕ್ತಿಗಳು ಸನಾತನ ಧರ್ಮದ ಉಳಿವಿಗಾಗಿ ಮತ್ತು ಶ್ರೀ ಮದ್ಭಾಗವತ ಹಾಗೂ ಗೋವಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುದು ಗ್ರಾಮದ ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಅಷ್ಟೋತ್ತರ ಶತ (108)ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗ,ಗೋನವರಾತ್ರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಮಹಾ ಯಾಗ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ,ಕಾರ್ಯಾಧ್ಯಕ್ಷ ತಾರಾನಾಥ ಕೊಟ್ಟಾರಿ,ಪ್ರದಾನ ಕಾರ್ಯದರ್ಶಿ ದಾಮೋಧರ ನೆತ್ತರಕೆರೆ,ಉಪಾಧ್ಯಕ್ಷೆ ಸುಲೋಚನಾ ಜಿ ಕೆ ಭಟ್,ಜೊತೆ ಕೋಶಾಧಿಕಾರಿ ವಸಂತಿ ಎಲ್ ಶೆಟ್ಟಿ,ನ್ಯಾಯವಾದಿ ಉಮಾ ಸೋಮಯಾಜಿ,ಸುಭದ್ರಾ ಮಾತಾಜಿ,ಮಹಾಲಕ್ಷ್ಮಿ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ವನಿತಾ ವಿ ಶೆಟ್ಟಿ,ಆರ್ಥಿಕ ಸಮಿತಿ ಸಂಚಾಲಕ ಡಾ. ಅಮಲಾ ಮತ್ತು ಡಾ. ಫ್ರೀಡಾ ಉಪಸ್ಥಿತರಿದ್ದರು.
ಮಹಿಳಾ ಸಮಿತಿ ಸಂಚಾಲಕಿ ಜಯಶ್ರೀ ಕರ್ಕೇರ ಸ್ವಾಗತಿಸಿ,ಸಹ ಸಂಚಾಲಕಿ ಕಮಲಾ ರಮೇಶ್ ನಾಣ್ಯ ವಂದಿಸಿದರು.