ಬಂಟ್ವಾಳ: ಭಾರತ ಕಮ್ಯೂನಿಸ್ಟ್‌ ‌ಪಕ್ಷದ ಬಂಟ್ವಾಳ ತಾಲೂಕು ಸಮ್ಮೇಳನವು ಬಿ.ಸಿ.ರೋಡ್ ನಲ್ಲಿ ಜರಗಿತು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಮೋಹನ್.ಕೆ.ಇ  ಅವರು‌ ಸಮ್ಮೇಳನವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿದ್ದ ಪಕ್ಷದ ಮಂಗಳೂರು ತಾಲೂಕು ಕಾರ್ಯದರ್ಶಿ ಭರತ್ ಕುಮಾರ್ ಮಾತನಾಡಿದರು.ಅದ್ಯಕ್ಷತೆಯನ್ನು ರಾಮಣ್ಣ ವಿಟ್ಲ ವಹಿಸಿದ್ದರು.

ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಶಂಕರ್ ಮಾತನಾಡಿ ಈ ದೇಶದ ಸಂಸದೀಯ ವ್ಯವಸ್ಥೆಯನ್ನೇ ನಾಶ ಮಾಡುವ ಮೂಲಕ ಒಂದು ದೇಶ ಒಂದು ಚುನಾವಣೆ ಎಂಬುದನ್ನು ಜಾರಿಮಾಡಲು ಹುನ್ನಾರಗಳು ನಡೆಯುತ್ತಿದೆ.ಮುಂಬರುವ ಚುನಾವಣೆಯಲ್ಲಿ ಬಿ.ಜೆ.ಪಿ ಯನ್ನು ಸೋಲಿಸುವ ಮೂಲಕ ಈ ದೇಶದ ಸಂವಿಧಾನವನ್ನು ಉಳಿಸಲು ಎಲ್ಲರೂ ಒಗ್ಗಟ್ಟಾಗಬೇಕೆಂದು ಜನತೆಗೆ ಕರೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ರಾಜಾ ಚೆಂಡ್ತಿಮಾರ್,ಸರಸ್ವತಿ ಮಾಣಿ,ಅಶ್ರಪ್ ಕೊಯಿಲ ಭಾಗವಹಿಸಿದ್ದರು.ತುಳಸೀದಾಸ್ ವಿಟ್ಲ ಸ್ವಾಗತಿಸಿ, ಸಮ್ಮೇಳನದ ವರದಿ ವಾಚಿಸಿದರು.
ಸಮ್ಮೇಳನದಲ್ಲಿ ನೂತನ ತಾಲೂಕು ಸಮಿತಿ ರಚಿಸಲಾಯಿತು,ಕಾರ್ಯದರ್ಶಿಯಾಗಿ ತುಳಸೀದಾಸ್ ವಿಟ್ಲ,ಸದಸ್ಯರುಗಳಾಗಿ ಶಿವರಾಯ ಪ್ರಭು, ಸರಸ್ವತಿ ಮಾಣಿ,ದಿನೇಶ ಆಚಾರಿ ಮಾಣಿ,ದೇವಪ್ಪ ಗೌಡ ಕನ್ಯಾನ,ಸಜೇಶ್ ವಿಟ್ಲ,ಬಾಲಕೃಷ್ಣ ಚೇಳೂರು,ರಾಜಾ ಚೆಂಡ್ತಿಮಾರ್,ಹಮೀದ್ ಕುಕ್ಕಾಜೆ, ಲಿಯಕತ್ ಖಾನ್,ಆನಂದ ಶೆಟ್ಟಿಗಾರ್ ಆಯ್ಕೆಯಾದರು.

By suddi9

Leave a Reply

Your email address will not be published. Required fields are marked *