Published On: Mon, Oct 9th, 2023

ಭಾರತ ಶ್ರೀರಾಮ,ಶಿವಾಜಿ ಮಹಾ ರಾಜರಂತ ಮಹಾ ಪುರುಷರು ಜನ್ಮತಾಳಿದ ಭೂಮಿ: ಸಾಧ್ವಿ ದೇವಿ ಸರಸ್ವತಿ ಜೀ

ಬಂಟ್ವಾಳ: ಭಾರತ ಟಿಪ್ಪುಸುಲ್ತಾನ್,ಔರಂಗಜೇಬ್ ರಂತಹ ಲೂಟಿಕೋರರ ಭೂಮಿಯಲ್ಲ,ಇದು ಶ್ರೀರಾಮ,ಶಿವಾಜಿ ಮಹಾ ರಾಜರಂತ ಮಹಾ ಪುರುಷರು ಜನ್ಮತಾಳಿದ ಭೂಮಿ ಎಂದು ಸಾಧ್ವಿ ದೇವಿ ಸರಸ್ವತಿ ಜೀ ಅವರು ಘರ್ಜಿಸಿದರು.

ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ದೇಶದಾದ್ಯಂತ ಸಂಚರಿಸುತ್ತಿರುವ ‘ಶೌರ್ಯ ಜಾಗರಣಾ ರಥಯಾತ್ರೆ‘ಯು ಭಾನುವಾರ ಬಂಟ್ವಾಳಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಬಂಟ್ವಾಳ ಬಸ್ತಿಪಡ್ಪು ಶೌರ್ಯ ಮೈದಾನ‌ದಲ್ಲಿ ಸಂಪನ್ನಗೊಂಡ ಬೃಹತ್ “ಜಾಗೃತ ಹಿಂದೂ ಸಮಾಜೋತ್ಸವ“ದಲ್ಲಿ‌ ಅವರು  ದಿಕ್ಸೂಚಿ ಭಾಷಣ ಗೈದರು.

ಹಿಂದೂಗಳೆಲ್ಲ ಸಹೋದರರು,ಯಾವ ಜಾತಿಯವನಾದರೂ ಅವನು ಹಿಂದುವೇ ಆಗಿದ್ದಾನೆ.ಹಿಂದೂಗಳು ಒಗ್ಗಟ್ಟಾದರೆ ಮಾತ್ರ ದೇಶ ಉಳಿಯುತ್ತದೆ ಮಾತ್ರವಲ್ಲ ವಿಶ್ವಕ್ಕೂ ಒಳಿತಾಗುತ್ತದೆ ಎಂದರು.
ಈ ದೇಶದ ಸಂಸ್ಕೃತಿ ನಾಶವಾದರೆ,ದೇಶವೇ ನಾಶವಾದೀತು,ನಾವೆಲ್ಲರೂ‌ ಸನಾತನಿಗಳು,ಸನಾತನ ಧರ್ಮ ಉಳಿಯಬೇಕಾದರೆ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕಾದ ಅನೀವಾರ್ಯತೆ ನಿರ್ಮಾಣವಾಗಿದೆ ಎಂದರು.

ಕರ್ನಾಟಕ ಶ್ರೀಗಂಧದ ನಾಡು,ಇದು ಅಂಜನೇಯನ ಭೂಮಿ,ಅವನ ಕೈಯಲ್ಲಿರುವ ಗದೆ,ಹಿಂದೂ ಧರ್ಮರಕ್ಷಣೆಗೆ ಆಯಧವಾಗಲಿ ಎಂದ ಅವರು ಮಾತೆಯರು ದುರ್ಗಾ ಮಾತೆಯಾರಾಗಬೇಕು,ಯುವಕರು ಬಜರಂಗಿಗಳಾಗಬೇಕು ಎಂದು ಕರೆ ನೀಡಿದರು.
ನಮ್ಮ ಧರ್ಮ,ಸಂಸ್ಕೃತಿ‌ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ.ಇತ್ತೀಚೆಗೆ ಹುಟ್ಟಿದಾತನೋರ್ವ ಸನಾತನ ಧರ್ಮ ನಾಶ ಮಾಡುತ್ತೇನೆಂಬ ದುರಹಂಕಾರ ಹೇಳಿಕೆ ಅವನ ಸರ್ವನಾಶಕ್ಕೆ ನಾಂದಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹನುಮನ ಪರಾಕ್ರಮ  ಯುವಕರಿಗೆ ಪ್ರರೇಣೆ: ಸು.ರಾಮಣ್ಣ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಮಾತನಾಡಿ,ಹನುಮಂತ ಶೌರ್ಯ ಮತ್ತು ಶೀಲದ ಪ್ರತೀಕವಾಗಿದ್ದು,ಸ್ವಾರ್ಥ ವಿಲ್ಲದ ಜೀವನ ನಡೆಸಿ ಆದರ್ಶನಾಗಿದ್ದಾನೆ.ಹನುಂಮತನ ಅದರ್ಶವನ್ನಿರಿಸಿಕೊಂಡು ಬಜರಂಗದಳ ಆರಂಭವಾಗಿದ್ದು,ಹನುಮಂತನ ಪರಾಕ್ರಮ ನಮ್ಮ ಯುವಕರಿಗೆ ಪ್ರರೇಣೆಯಾಗಬೇಕು ಎಂದರು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ,ಶ್ರೀಧಾಮ‌ ಮಾಣಿಲದ ಮೋಹನದಾಸ ಸ್ವಾಮೀಜಿ,ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ,ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತ್ಯನ್ಯಾಂದ ಸ್ವಾಮೀಜಿ,ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಕಾರ್ಯಧ್ಯಕ್ಷ ಡಾ.ಎಂ.ಬಿ.ಪುರಾಣಿಕ್,ವಿ .ಹಿಂ.ಪ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ರವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು.

ಶೌರ್ಯ ಜಾಗರಣ ರಥಯಾತ್ರೆ ಯ ಸ್ವಾಗತ ಸಮಿತಿ ಅಧ್ಯಕ್ಷರು,ಕಾವೇಶ್ವರ ದೇವಸ್ಥಾನದ ಸಮಿತಿ ಕಾರ್ಯಾಧ್ಯಕ್ಷ ರಘ ಎಲ್ ಶೆಟ್ಟಿ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಮೊದಲಾದ ಹಲವು ಗಣ್ಯರು,ಸಂಘ ಪರಿವಾರ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಮಾಣಿಯಲ್ಲಿ ಸ್ವಾಗತ:
ಮಾಣಿಯಲ್ಲಿ  ಶೌರ್ಯ ಜಾಗರಣ ರಥಯಾತ್ರೆ ರಥವನ್ನು ಬಂಟ್ವಾಳಕ್ಕೆ ಸ್ವಾಗತಿಸಲಾಯಿತು.ಪೆರಾಜೆ ಶ್ರೀರಾಮ ಚಂದ್ರಾಪುರ ಮಠ ದ್ವಾರದಿಂದ ಬೃಹತ್ ಶೋಭಾಯಾತ್ರೆ ಮಾಣಿಯವರೆಗೆ ಕುಣಿತ ಭಜನೆ,ನಾಸಿಕ್ ಬ್ಯಾಂಡ್ ಸಹಿತ ಹಲವಾರು ಮಂದಿ ಭಾಗವಹಿಸಿದ್ದರು‌ ಕ್ಯಾಪ್ಟನ್ ಬೃಜೇಶ್ ಚೌಟ  ಸ್ವಾಗತಿಸಿ ಮಾತನಾಡಿದರು.ಮಾಜಿ ಶಾಸಕ ಎ.ರುಕ್ಮಯ ಪೂಜಾರಿ,ಪದ್ಮನಾಭ ಕೊಟ್ಟಾರಿ,ರಾಜಾರಾಮ ಕಾಡೂರು,ಕ.ಕೃಷ್ಣಪ್ಪ,ಸಾಂತಪ್ಪ ಪೂಜಾರಿ,ಮೋನಪ್ಪ ದೇವಸ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಬಿ.ಸಿ.ರೋಡಿನ ರಾಜಾ ರಸ್ತೆಯಲ್ಲಿ ಶೋಭಾಯಾತ್ರೆ:
ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಶೌರ್ಯ ಜಾಗರಣ ರಥಯಾತ್ರೆಯ ವೈಭವಯುತವಾದ ಶೋಭಾಯಾತ್ರೆಯು ಬಿ.ಸಿ.ರೋಡಿನ ಹೆದ್ದಾರಿಯ ರಾಜಾ ರಸ್ತೆಯಲ್ಲಿ  ಸಾಗಿ ಬಂದು ಸಮಾಜೋತ್ಸವ ನಡೆಯುವ ಮೈದಾನದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಸಾವಿರಾರು ಮಂದಿ ಹಿಂದೂ ಕಾರ್ಯಕರ್ತರು ಹೆದ್ದಾರಿಯುದ್ದಕ್ಕೂ ಜೈಘೋಷ ಹಾಕಿ ಹೆಜ್ಜೆ ಹಾಕಿದರು.

ವಿಶ್ವ ಹಿಂದು ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ‌ ಸ್ವಾಗತಿಸಿ,ಭಾಸ್ಕರ ರಾವ್ ಪ್ರರೇಣಾ ಗೀತೆ ಹಾಡಿದರು. ವಿ.ಹಿಂ.ಪ.ನ ಕಲ್ಲಡ್ಕ ಘಟಕದ ಅಧ್ಯಕ್ಷ ಸಚ್ಚಿನ್ ಮೆಲ್ಕಾರ್ ವಂದಿಸಿದರು.

ವಿಶ್ವ ಹಿಂದೂ ಪರಿಷತ್ – ಬಜರಂಗ ದಳ ಬಂಟ್ವಾಳ ಪ್ರಖಂಡದ ವತಿಯಿಂದ ನಡೆಯುವ  ಜಾಗೃತ ಹಿಂದೂ ಸಮಾಜೋತ್ಸವಕ್ಕೆ ಕಲ್ಲಡ್ಕ,ವಿಟ್ಲ,ವೇಣೂರು ಘಟಕಗಳು ಹಾಗೂ ಆರ್. ಎಸ್ .ಎಸ್.ನ ಅಧೀನದಲ್ಲಿರುವ ಪರಿವಾರ ಸಂಘಟನೆಗಳು ಕೂಡ ಸಾಥ್ ನೀಡಿದರು.

ಪೋಲೀಸ್ ಬಂದೋಬಸ್ತ್:
ಸಮಾಜೋತ್ಸವದ ಹಿನ್ನೆಲೆಯಲ್ಲಿ ಮತ್ತು‌ ಕಾರ್ಯಕ್ರಮ ಶಾಂತಿಯುತವಾಗಿ  ನಡೆಯುವ ನಿಟ್ಟಿನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter