ಹವ್ಯಾಸಿ ನಾಟಕಗಳಿಂದ ಆಯ್ದ ಗೀತೆಗಳ ‘ರಂಗ ಸಂಗೀತ ‘ ಕಾರ್ಯಕ್ರಮ
ಬಂಟ್ವಾಳ: ಕನ್ನಡದ ಹವ್ಯಾಸಿ ನಾಟಕಗಳಿಂದ ಆಯ್ದ ಗೀತೆಗಳ ‘ರಂಗ ಸಂಗೀತ’ ಕಾರ್ಯಕ್ರಮವನ್ನು ಸಾಹಿತ್ಯಕ-ಸಾಂಸ್ಕೃತಿಕ ವೇದಿಕೆ ‘ಅಭಿರುಚಿ’ ಜೋಡುಮಾರ್ಗ ಏರ್ಪಡಿಸಿದ್ದು,ಬಿ.ಸಿ. ರೋಡ್ ನ ಕನ್ನಡ ಭವನದಲ್ಲಿ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ (ರಿ)ತಂಡದ ಕಲಾವಿದರು ಪ್ರಸ್ತುತ ಪಡಿಸಿದ ಈ ಕಾರ್ಯಕ್ರಮ ಸೇರಿದ್ದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

1970ರ ದಶಕದಲ್ಲಿ ಪ್ರದರ್ಶನಗೊಂಡ ‘ಹಯ ವದನ’ ನಾಟಕದ ‘ಗಜವದನ ಹೇರಂಭ’ ರಿಂದ ತೊಡಗಿದ ಕಾರ್ಯಕ್ರಮ ‘ನಿನಗೆ ನೀನೇ ಗೆಳತಿ’,ಪಂಜರ ಶಾಲೆ’,ಹುತ್ತವ ಬಡಿದರೆ’,ಚಿತ್ರಪಟ ರಾಮಾಯಣ’,ನವೀನ ಸದಾರಮೆ’,ಗೋಕುಲ ನಿರ್ಗಮನ’,’ಅಗ್ನಿವರ್ಣ’ ಮುಂತಾದ ನಾಟಕಗಳಿಂದ ಆಯ್ದ ಗೀತೆಗಳನ್ನು ಒಳಗೊಂಡು ಆಧುನಿಕ ಕನ್ನಡ ರಂಗಭೂಮಿ ನಡೆದು ಬಂದ ದಾರಿಯನ್ನೂ ನೆನಪಿಸಿತು.
ಮುಖ್ಯವಾಗಿ ರಂಗ ಸಂಗೀತ ಕ್ಷೇತ್ರಕ್ಕೆ ‘ರಂಗ ಜಂಗಮ’ಎಂದೇ ಖ್ಯಾತರಾದ ಬಿ.ವಿ.ಕಾರಂತರು ನೀಡಿದ ಹೊಸ ಆಯಾಮ,ಮಹತ್ತರ ಕೊಡುಗೆಯನ್ನು ನೆನೆಯುವಂತೆ ಮಾಡಿತು.ಕವಿ ರಾಧೇಶ ತೋಳ್ಪಾಡಿ ಪ್ರಸ್ತಾವಿಸಿ,ಸ್ವಾಗತಿಸಿದರು.ಪ್ರಾಧ್ಯಾಪಕ ಚೇತನ್ ಮುಂಡಾಜೆ ವಂದಿಸಿದರು.