ಬಂಟ್ವಾಳ ವಲಯ ಅರಣ್ಯಾಧಿಕಾರಿಯಾಗಿ ಪ್ರಪುಲ್ ರೈ ಅಧಿಕಾರ ಸ್ವೀಕಾರ
ಬಂಟ್ವಾಳ: ಬಂಟ್ವಾಳ ವಲಯ ಅರಣ್ಯಾಧಿಕಾರಿಯಾಗಿ ಪ್ರಪುಲ್ ರೈ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಶನಿವಾರ ಸಂತೆಯ ವಲಯ ಅರಣ್ಯಾಧಿಕಾರಿಯಾಗಿದ್ದ ಪ್ರಪುಲ್ ಅವರನ್ನು ಬಂಟ್ವಾಳ ವಲಯಕ್ಕೆ ನಿಯುಕ್ತಿಗೊಳಿಸಲು ಸರಕಾರ ಆದೇಶಿಸಿತ್ತು.
ಬಂಟ್ವಾಳ ವಲಯ ಅರಣ್ಯಾಧಿಕಾರಿಯಾಗಿದ್ದ ರಾಜೇಶ್ ಬಳಿಗಾರ್ ಅವರನ್ನು ಮಂಗಳೂರಿಗೆ ವರ್ಗಾಯಿಸಲಾಗಿದ್ದು,ತೆರವಾದ ಈ ಸ್ಥಾನಕ್ಕೆ ಪ್ರಪುಲ್ ರೈ ಅವರನ್ನು ನಿಯೋಜಿಸಲಾಗಿದೆ.