ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಬಂಟ್ವಾಳ ಉಪಸಮಿತಿ ವಾರ್ಷಿಕ ಮಹಾಸಭೆ
ಬಂಟ್ವಾಳ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ರಿ. ಬೆಂಗಳೂರು ಇದರ ಬಂಟ್ವಾಳ ಉಪಸಮಿತಿ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಶನಿವಾರ ನಡೆಯಿತು.
ಕ.ರಾ.ಅ.ವಿ.ಗು.ಸಂಘ ಬಂಟ್ವಾಳ ಉಪಸಮಿತಿ ಅಧ್ಯಕ್ಷರಾದ ಪಿ.ಸುಬ್ರಹ್ಮಣ್ಯ ರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಉಪಾಧ್ಯಕ್ಷರಾದ ಉರ್ಬಾನ್ ಪಿಂಟೊ, ಜಿಲ್ಲಾಧ್ಯಕ್ಷ ಕುಶಲ ಪೂಜಾರಿ,ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ ಪಿ.,ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಎನ್.ಎ.ಯೂಸುಫ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಸಪಲ್ಯ ವೇದಿಕೆಯಲ್ಲಿದ್ದರು.
ಏಲಬೆ ಪದ್ಮನಾಭ ಮಯ್ಯ ಸ್ವಾಗತಿಸಿದರು.ಎನ್.ಎ.ಯೂಸುಫ್ ವಾರ್ಷಿಕ ವರದಿ ವಾಚಿಸಿದರು.ಕೋಶಾಧಿಕಾರಿ ಬಿ.ಪರಮೇಶ್ವರ ಲೆಕ್ಕ ಪತ್ರ ಮಂಡಿಸಿದರು.ಉಪಾಧ್ಯಕ್ಷ ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.
ನೂತನ ಅಧ್ಯಕ್ಷರಾಗಿ ಜೋಕಿಂ
ಇದೇ ವೇಳೆ ೨೦೨೩-೨೬ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾಧ್ಯಕ್ಷ ಕುಶಲ ಪೂಜಾರಿ ಅವರು ನಡೆಸಿಕೊಟ್ಟರು.ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ರಿ. ಬೆಂಗಳೂರು ಇದರ ಬಂಟ್ವಾಳ ಉಪಸಮಿತಿಯ ನೂತನ ಅಧ್ಯಕ್ಷರಾಗಿ ಜೋಕಿಂ ವಿಲಿಯಮ್ ಮೆನೆಜಸ್ ಅವರು ಆಯ್ಕೆಗೊಂಡರು.
ಪದ್ಮನಾಭ ಮಯ್ಯ,ಇಬ್ರಾಹಿಂ ಸೂಫಿ ಉಪಾಧ್ಯಕ್ಷರು,ಎ.ಹೆಚ್.ಅಬ್ದುಲ್ ಸಲಾಂ ಕಾರ್ಯದರ್ಶಿ,ಯೋಗೇಶ್ ಜತೆಕಾರ್ಯದರ್ಶಿ,ರವಿಚಂದ್ರ ಕೋಶಾಧಿಕಾರಿ,ಸ್ಟೇನಿ ಡಿಕುನ್ಹಾ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.